ನಿಮ್ಮಲ್ಲಿ 80,000 ಪೊಲೀಸರಿದ್ದರೂ ಅಮೃತ್ ಪಾಲ್ ನನ್ನು ಏಕೆ ಬಂಧಿಸಿಲ್ಲ: ಪಂಜಾಬ್ ಸರಕಾರಕ್ಕೆ ಹೈಕೋರ್ಟ್ ತರಾಟೆ

ಖಾಲಿಸ್ತಾನಿ ನಾಯಕನ ಪತ್ತೆಗೆ ಮುಂದುವರಿದ ಪೊಲೀಸರ ಹುಡುಕಾಟ

Update: 2023-03-21 10:06 GMT

ಹೊಸದಿಲ್ಲಿ: ಖಾಲಿಸ್ತಾನಿ ನಾಯಕ ಅಮೃತ್ ಪಾಲ್ ಸಿಂಗ್ "ಪರಾರಿ"ಯಾಗಿರುವ  ಕುರಿತು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿರುವ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ "ಗುಪ್ತಚರ ವೈಫಲ್ಯ" ಕ್ಕಾಗಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ನಿಮ್ಮಲ್ಲಿ 80,000 ಪೊಲೀಸರಿದ್ದಾರೆ. ಅವರು ಏನು ಮಾಡುತ್ತಿದ್ದರು. ಅಮೃತಪಾಲ್ ಸಿಂಗ್ ಹೇಗೆ ತಪ್ಪಿಸಿಕೊಂಡ ? ಆತನನ್ನು ಏಕೆ ಬಂಧಿಸಲಾಗಿಲ್ಲ?  ಎಂದು ಪಂಜಾಬ್ ಅಡ್ವಕೇಟ್ ಜನರಲ್ ವಿನೋದ್ ಘಾಯ್ ಅವರನ್ನು ಪೀಠವು ಪ್ರಶ್ನಿಸಿದೆ.

ಅಮೃತಪಾಲ್ ಸಿಂಗ್  ಹೊರತುಪಡಿಸಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಅಮೃತಪಾಲ್ ಸಿಂಗ್ ವಿರುದ್ಧ ಕಟ್ಟುನಿಟ್ಟಿನ ಎನ್‌ಎಸ್‌ಎಯನ್ನು ಹೇರಲಾಗಿದೆ ಎಂದು ಎಜಿ ವಿನೋದ್ ಘಾಯ್ ನ್ಯಾಯಾಲಯಕ್ಕೆ ತಿಳಿಸಿದರು.

ರಾಜ್ಯದ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಲು ಪ್ರಯತ್ನಿಸುವವರ ವಿರುದ್ಧ ತಮ್ಮ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮಂಗಳವಾರ ಹೇಳಿದ್ದಾರೆ.

"ದೇಶದ ವಿರುದ್ಧ ಕೆಲಸ ಮಾಡುವ ಯಾವುದೇ ಶಕ್ತಿಯನ್ನು ನಾವು ಬಿಡುವುದಿಲ್ಲ, ಚುನಾವಣೆಯಲ್ಲಿ ಜನರು ಎಎಪಿಗೆ ಭಾರಿ ಜನಾದೇಶವನ್ನು ನೀಡುವ ಮೂಲಕ ಜನರು ನಮ್ಮ ಜವಾಬ್ದಾರಿಯನ್ನು ನೀಡಿದ್ದಾರೆ" ಎಂದು ಅವರು ಹೇಳಿದರು.

Similar News