ಚಿಕಿತ್ಸೆಗೆ ತಗಲುತ್ತಿದ್ದ ಅತಿಯಾದ ವೆಚ್ಚದಿಂದ ನೊಂದು ಹೋಟೆಲ್‌ ಕೊಠಡಿಯಲ್ಲಿ ಆತ್ಮಹತ್ಯೆಗೈದ ಯುವಕ

Update: 2023-03-22 06:41 GMT

ಹೊಸದಿಲ್ಲಿ: ತನ್ನ ಆರೋಗ್ಯ ಸಮಸ್ಯೆಯ ಚಿಕಿತ್ಸೆಗೆ ತಗಲುತ್ತಿದ್ದ ಅತಿಯಾದ ವೆಚ್ಚದಿಂದ ಬೇಸತ್ತ 24 ವರ್ಷದ ಯುವಕನೊಬ್ಬ ಹೋಟೆಲ್‌ ಕೊಠಡಿಯೊಂದರಲ್ಲಿ ಸಿಲಿಂಡರ್‌ ಒಂದನ್ನು ಬಳಸಿಕೊಂಡು ಆಮ್ಲಜನಕ ಓವರ್‌ಡೋಸ್‌ ಮಾಡಿಕೊಂಡು ಆತ್ಮಹತ್ಯೆಗೈದ ಘಟನೆ ರಾಜಧಾನಿಯಿಂದ ವರದಿಯಾಗಿದೆ.

ಮೃತ ಯುವಕನನ್ನು ನಿತೇಶ್‌ ಎಂದು ಗುರುತಿಸಲಾಗಿದೆ. ಉತ್ತರ ದಿಲ್ಲಿಯ ಆದರ್ಶ್‌ ನಗರ್‌ ಪ್ರದೇಶದ ಹೋಟೆಲ್‌ ಒಂದರಲ್ಲಿ ಮಂಗಳವಾರ ಕೊಠಡಿ ಪಡೆದುಕೊಂಡಿದ್ದ ನಿತೇಶ್‌ ತನ್ನೊಂದಿಗೆ ಸಣ್ಣ ಚೀಲವೊಂದನ್ನು ಕೊಠಡಿಗೆ ಒಯ್ದಿದ್ದ. ಮುಖಕ್ಕೆ ಪ್ಲಾಸ್ಟಿಕ್‌ ಕವರ್‌ ಸುತ್ತಿಕೊಂಡು ಆತನ ಮೃತದೇಹ ಪತ್ತೆಯಾಗಿತ್ತು. ಆ ಪ್ಲಾಸ್ಟಿಕ್‌ ಚೀಲದೊಳಗೆ ಒಂದು ಟ್ಯೂಬ್‌ ಇದ್ದರೆ ಅದು ಸಣ್ಣ ಆಕ್ಸಿಜನ್‌ ಸಿಲಿಂಡರ್‌ ಒಂದಕ್ಕೆ ಸಂಪರ್ಕ ಹೊಂದಿತ್ತು.

ಆತಿಯಾಗಿ ಆಮ್ಲಜನಕ ಪಡೆದುಕೊಂಡಾಗ ಅದು ಹೃದಯ ಬಡಿತವನ್ನು ಅಪಾಯಕಾರಿಯಾಗಿ ಕಡಿಮೆಗೊಳಿಸಿ ಆಕ್ಸಿಜನ್‌ ಪಾಯ್ಸನಿಂಗ್‌ಗೆ ಕಾರಣವಾಗುತ್ತದೆ.

ಹೋಟೆಲ್‌ ಕೊಠಡಿಯಲ್ಲಿ  ಸುಸೈಡ್‌ ನೋಟ್‌ ಒಂದು ಪತ್ತೆಯಾಗಿದೆ. ಅದರಲ್ಲಿ ತನ್ನ ದೀರ್ಘಕಾಲೀನ ಕಾಯಿಲೆ, ಆಸ್ಪತ್ರೆ ವೆಚ್ಚದ ಕುರಿತು ಉಲ್ಲೇಖಿಸಲಾಗಿತ್ತಲ್ಲದೆ ಹೆತ್ತವರು ತನ್ನ ಚಿಕಿತ್ಸೆಗಾಗಿ ಇನ್ನಷ್ಟು ವೆಚ್ಚ ಮಾಡುವ ಮನಸ್ಸಿನಲ್ಲದೆ ಜೀವನ ಅಂತ್ಯಗೊಳಿಸಲು ನೋವಿಲ್ಲದ ವಿಧಾನಗಳಿಗಾಗಿ ಆನ್‌ಲೈನ್‌ನಲ್ಲಿ ಹುಡುಕಿದ್ದಾಗಿ ಆತ ಬರೆದಿದ್ದಾನೆ.

ಆನ್‌ಲೈನ್‌ನಲ್ಲಿ ಈ ಆಕ್ಸಿಜನ್‌ ವಿಧಾನ ಕಂಡುಕೊಂಡು ಆ ಕುರಿತು ಹಲವು ವೀಡಿಯೋಗಳನ್ನೂ ಆತ ವೀಕ್ಷಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್:‌ 100 ಕ್ಕೂ ಅಧಿಕ ಎಫ್‌ಐಆರ್‌, 6 ಮಂದಿಯನ್ನು ಬಂಧಿಸಿದ ದಿಲ್ಲಿ ಪೊಲೀಸ್

Similar News