ಬೀದಿ ಹೊತ್ತಿ ಉರಿಯುತ್ತಿದ್ದರೂ ಹೋಟೆಲ್ ನಲ್ಲಿ ಶಾಂತವಾಗಿ ಆಹಾರ ಸೇವಿಸುತ್ತಿರುವ ಗ್ರಾಹಕರ ವಿಡಿಯೋ ವೈರಲ್‌ !

Update: 2023-03-22 15:26 GMT

ಹೊರ ಬೀದಿ ಹೊತ್ತಿ ಉರಿಯುತ್ತಿದ್ದರೂ  ಹೋಟೆಲ್ ಒಂದರಲ್ಲಿ ಗ್ರಾಹಕರು ಶಾಂತ ಚಿತ್ತದಲ್ಲಿ ಆಹಾರ ಸೇವಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿವೆ. ಈ ವಿಡಿಯೋವನ್ನು ಪ್ಯಾರಿಸ್‌ನ ರೆಸ್ಟಾರೆಂಟ್‌ ಒಂದರಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದ್ದು, ಇದನ್ನು ಪಾವೆಲ್‌ ವಾರ್ಗನ್‌ ಎಂಬವರು ಟ್ವೀಟ್‌ ಮಾಡಿದ್ದಾರೆ. 

'ದಿಸ್‌ ಇಸ್‌ ಫೈನ್‌' (ಇದು ಚೆನ್ನಾಗಿದೆ) ಮೀಮ್‌ ಅನ್ನು ಫ್ರೆಂಚ್‌ ನಿಜಬದುಕಿನಲ್ಲಿ ಮಾಡಿ ತೋರಿಸಿದೆ ಎಂದು ಅವರು ಬರೆದಿದ್ದಾರೆ. 

ಕಾರ್ಟೂನ್‌ ನಾಯಿಯೊಂದು ಉರಿಯುತ್ತಿರುವ ಮನೆಯಲ್ಲಿ ಕುಳಿತು ʼದಿಸ್‌ ಇಸ್‌ ಫೈನ್‌ʼ ಎಂದು ಹೇಳುವ ಮೀಮ್‌ ಜನಪ್ರಿಯವಾಗಿದ್ದು, ಪಾವೆಲ್‌ ಅದನ್ನು ತಮ್ಮ ಟ್ವೀಟ್‌ ನಲ್ಲಿ ಉಲ್ಲೇಖಿಸಿದ್ದಾರೆ. ಹಲವಾರು ನೆಟ್ಟಿಗರು ಈ ಟ್ವೀಟ್‌ ಅನ್ನು ಮರು ಹಂಚಿಕೊಂಡಿದ್ದು, ಕಾರ್ಟೂನ್‌ ಮೀಮ್‌ ನೊಂದಿಗೆ ಹೊಂದಿರುವ ಸಾಮ್ಯತೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Similar News