ದೇಶದ ಪ್ರಸಕ್ತ ಸನ್ನಿವೇಶದಲ್ಲಿ ಗುಜರಾತಿಗಳು ಮಾತ್ರ ವಂಚಕರಾಗಬಹುದು ಎಂದ ತೇಜಸ್ವಿ ಯಾದವ್‌

Update: 2023-03-23 08:05 GMT

ಪಾಟ್ನಾ: ಪಿಎನ್‌ಬಿ ಬ್ಯಾಂಕ್‌ (PNB Bank) ಹಗರಣದ ಆರೋಪಿ, ವಜ್ರೋದ್ಯಮಿ ಮೆಹುಲ್‌ ಚೊಕ್ಸಿಯ ಹೆಸರನ್ನು ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ಇಂಟರ್‌ಪೋಲ್‌ ವಾಪಸ್‌ ಪಡೆದ ಬೆನ್ನಿಗೆ ಪ್ರತಿಕ್ರಿಯಿಸಿರುವ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ (Tejashwi Yadav), "ದೇಶದಲ್ಲಿನ ಪ್ರಸಕ್ತ ಪರಿಸ್ಥಿತಿಯಲ್ಲಿ ಗುಜರಾತಿ ಮಾತ್ರ ವಂಚಕನಾಗಬಹುದು, ಏಕೆಂದರೆ ಅವನ ವಂಚನೆಗೂ ಕ್ಷಮೆ ದೊರೆಯುತ್ತದೆ," ಎಂದು ಹೇಳಿದರು.

ಬಿಜೆಪಿಯ (BJP) ವಿರುದ್ಧ ಕಿಡಿಕಾರಿದ ತೇಜಸ್ವಿ ಯಾದವ್‌, ಯಾರಾದರೂ ದೇಶದ ಎಲ್‌ಐಸಿ ಹಾಗೂ ಬ್ಯಾಂಕ್‌ಗಳ ಹಣದೊಂದಿಗೆ ಪರಾರಿಯಾದರೆ ಯಾರು ಹೊಣೆಗಾರರಾಗುತ್ತಾರೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಇಡೀ ಸರಕಾರಿ ಯಂತ್ರಗಳು ರಾಹುಲ್ ಗಾಂಧಿಯವರ  ಧ್ವನಿ ಹತ್ತಿಕ್ಕಲು ಪ್ರಯತ್ನಿಸುತ್ತಿವೆ: ಪ್ರಿಯಾಂಕಾ ಗಾಂಧಿ

Similar News