ರಾಜಸ್ಥಾನ, ಬಿಹಾರ, ದಿಲ್ಲಿ, ಒಡಿಶಾ ರಾಜ್ಯ ಘಟಕಗಳಿಗೆ ಹೊಸ ಅಧ್ಯಕ್ಷರನ್ನು ನೇಮಿಸಿದ ಬಿಜೆಪಿ

Update: 2023-03-23 09:25 GMT

ಹೊಸದಿಲ್ಲಿ: ನಿರ್ಣಾಯಕ ರಾಜ್ಯ ಹಾಗೂ  ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ಪಕ್ಷವು ತನ್ನ ಬೆಂಬಲ ನೆಲೆಯನ್ನು ಕ್ರೋಢೀಕರಿಸುವ ದೃಷ್ಟಿಯಿಂದ ತನ್ನ ಸಂಘಟನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು  ಮುಂದಾಗಿರುವ ಬಿಜೆಪಿ,  ರಾಜಸ್ಥಾನದಲ್ಲಿ ಲೋಕಸಭೆ ಸಂಸದ ಸಿಪಿ ಜೋಶಿ ಹಾಗೂ  ಬಿಹಾರದಲ್ಲಿ ಒಬಿಸಿ ನಾಯಕ ಮತ್ತು ಎಂಎಲ್‌ಸಿ ಸಾಮ್ರಾಟ್ ಚೌಧರಿ ಸೇರಿದಂತೆ ನಾಲ್ವರು ಹೊಸ ರಾಜ್ಯಾಧ್ಯಕ್ಷರನ್ನು ಇಂದು ನೇಮಿಸಿದೆ

ಮಾಜಿ ರಾಜ್ಯ ಸಚಿವ ಮನಮೋಹನ್ ಸಮಾಲ್ ಅವರನ್ನು ಪಕ್ಷದ ಒಡಿಶಾ ಘಟಕದ ಮುಖ್ಯಸ್ಥರನ್ನಾಗಿ ದಿಲ್ಲಿಯ ಕಾರ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಅವರನ್ನು ದಿಲ್ಲಿ ಮುಖ್ಯಸ್ಥರನ್ನಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರು ನೇಮಿಸಿದ್ದಾರೆ

ಚೌಧರಿ (54 ವರ್ಷ)  2018 ರಲ್ಲಿ ಪಕ್ಷಕ್ಕೆ ಸೇರಿದ ನಂತರ ಬಿಜೆಪಿಯೊಳಗೆ ಸ್ಥಿರವಾಗಿ ಬೆಳೆದಿದ್ದಾರೆ. ಬಿಹಾರ ವಿಧಾನ ಪರಿಷತ್ತಿನಲ್ಲಿ ಪಕ್ಷದ ನಾಯಕರಾಗಿದ್ದಾರೆ. ರಾಜಕೀಯವಾಗಿ ಪ್ರಮುಖವಾದ ಕುಶ್ವಾಹ ಸಮುದಾಯದಿಂದ ಬಂದಿರುವ  ಅವರು ಲೋಕಸಭೆಯ ಸಂಸದ ಸಂಜಯ್ ಜೈಸ್ವಾಲ್ ಅವರ ಬದಲಿಗೆ  ಬಿಹಾರ ಬಿಜೆಪಿಯ ಅಧ್ಯಕ್ಷ ಸ್ಥಾನವಹಿಸಿಕೊಳ್ಳಲಿದ್ದಾರೆ.

ಸಿ.ವಿ. ಜೋಶಿ (47 ವರ್ಷ) ಅವರು ಜೈಪುರದ ಅಂಬರ್ ಕ್ಷೇತ್ರದ ಶಾಸಕರಾದ ಸತೀಶ್ ಪೂನಿಯಾ ಅವರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.   ಬ್ರಾಹ್ಮಣ ಸಮುದಾಯದ  ಜೋಶಿ ಚಿತ್ತೋರ್‌ಗಢ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಸಂಸದರಾಗಿದ್ದಾರೆ.

ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನಕ್ಕೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ.

Similar News