ನಾಗಾ ಶಾಂತಿ ಮಾತುಕತೆಗೆ ಭಾರತ ಸರಕಾರ ಬದ್ಧವಾಗಿಲ್ಲ: ಎನ್‍ಎಸ್‍ಸಿಎನ್ ಆರೋಪ

Update: 2023-03-23 10:24 GMT

ಹೊಸದಿಲ್ಲಿ: ನಾಗಾ ಶಾಂತಿ ಮಾತುಕತೆಗಳಲ್ಲಿ (Naga Peace Talks) ಪ್ರಮುಖ ಸಂಧಾನಕಾರನಾಗಿರುವ ನ್ಯಾಷನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (NSCN) ಇದರ ಐಸಾಕ್-ಮುವಯ್ಯ ಬಣವು  ಕೇಂದ್ರ ಸರಕಾರದ ವಿರುದ್ಧ ಗಂಭೀರ ಆರೋಪ ಹೊರಿಸಿದೆಯಲ್ಲದೆ ಅದು ಶಾಂತಿ ಮಾತುಕತೆಗಳಿಗೆ ಬದ್ಧವಾಗಿಲ್ಲ ಎಂದು ಹೇಳಿದೆ.

ನಾಗಾಲ್ಯಾಂಡಿನ ದಿಮಾಪುರದಲ್ಲಿ ಮಂಗಳವಾರ ನಡೆದ 44ನೇ ಗಣರಾಜ್ಯೋತ್ಸವ ದಿನದ ಸಂದರ್ಭ ಎನ್‍ಎಸ್‍ಸಿಎನ್ ಇದರ  ಮುಖಂಡ ಖ್ಯೂಹೆಝು ಮಾತನಾಡುತ್ತಾ ಈ ದಶಕಗಳ ಕಾಲದ ಸಮಸ್ಯೆಯನ್ನು ಪರಿಹರಿಸುವಲ್ಲಿನ ಭಾರತ ಸರಕಾರದ ಬದ್ಧತೆಯು ಅತ್ತಿತ್ತ ವಾಲುತ್ತಿದೆ ಎಂದಿದ್ದಾರೆ.

ತಮ್ಮ ಸಂಸ್ಥೆಯೊಂದಿಗೆ ಆಗಸ್ಟ್ 3, 2015 ರಂದು ಸಹಿ ಹಾಕಿದ ಫ್ರೇಮ್‍ವರ್ಕ್ ಒಪ್ಪಂದವನ್ನು ಮೋದಿ ಸರಕಾರ ಗೌರವಿಸುತ್ತಿಲ್ಲ ಎಂದು ಅವರು ಆರೋಪಿಸಿದರು. ಈ ಒಪ್ಪಂದದ ಮಹತ್ವವನ್ನು ಗೌಣವಾಗಿಸಲು ಭಾರತ ಸರಕಾರ ಯತ್ನಿಸುತ್ತಿದೆ ಎಂದೂ ಅವರು ಆರೋಪಿಸಿದರು.

ಇದನ್ನೂ ಓದಿ: ಅದಾನಿ ಸಮೂಹದಲ್ಲಿ ಬಿರುಗಾಳಿ ಎಬ್ಬಿಸಿದ ಬಳಿಕ ಶೀಘ್ರದಲ್ಲಿ ಮತ್ತೊಂದು ವರದಿ ಪ್ರಕಟಿಸುವುದಾಗಿ ಹೇಳಿದ ಹಿಂಡೆನ್‌ ಬರ್ಗ್

Similar News