ಡಿಎಂಕೆ ಸರಕಾರದ ಯೋಜನೆಯನ್ನು ಅಣಕಿಸಿ ಟ್ವೀಟ್: ಓರ್ವನ ಬಂಧನ

Update: 2023-03-23 10:44 GMT

ಚೆನ್ನೈ: ಗೃಹಿಣಿಯರಿಗೆ ರೂ. 1000 ಸಹಾಯ ಧನ ನೀಡುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆ (DMK) ಸರ್ಕಾರದ ಯೋಜನೆಯನ್ನು ಅಣಕಿಸಿ ವಿಡಿಯೊ ಹಂಚಿಕೊಂಡಿದ್ದ ಟ್ವಿಟರ್ (Twitter) ಖಾತೆಯ ಅಡ್ಮಿನ್ ನನ್ನು  ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ ಎಂದು Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರದೀಪ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಣಕಿಸಿ ಮಾಡಿದ್ದ ಆ ವಿಡಿಯೊವನ್ನು ತೆಗೆಯಲು ನಿರಾಕರಿಸಿ, ಪದೇ ಪದೇ ಹಂಚಿಕೊಂಡಿದ್ದರಿಂದ ಆತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಗುಂಪುಗಳ ನಡುವೆ ದ್ವೇಷ ಹರಡುವಿಕೆ, ಸಾರ್ವಜನಿಕ ದುರ್ನಡತೆ ಹಾಗೂ ಮಹಿಳೆಯರ ಘನತೆಗೆ ಕುಂದುಂಟು ಮಾಡಿದ ಹಲವಾರು ಸೆಕ್ಷನ್‌ಗಳಡಿ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರದೀಪ್ Voice of Savukku Shankar ಎಂಬ ಟ್ವಿಟರ್ ಖಾತೆಯ ನಿರ್ವಾಹಕನಾಗಿದ್ದಾನೆ. ಈ ಖಾತೆಯು Suvukkku Shankar ಎಂಬುವವರ ಹೆಸರಿನಲ್ಲಿದ್ದು, ಆತನಿಗೆ ಕಳೆದ ಸೆಪ್ಟೆಂಬರ್‌ನಲ್ಲಿ ನ್ಯಾಯಾಂಗ ನಿಂದನೆ ಆರೋಪದಡಿ ಆರು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಒಂದು ತಿಂಗಳ ನಂತರ ಆತನ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಅಮಾನತ್ತಿನಲ್ಲಿರಿಸಿತ್ತು.

ಸಾಮಾಜಿಕ ಮಾಧ್ಯಮ ಪುಟದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರ ಹೆಸರಿನಲ್ಲಿ ತಮಿಳು ಹಾಸ್ಯಚಿತ್ರದ ಪಾತ್ರಗಳನ್ನು ಪ್ರದೀಪ್ ಹಂಚಿಕೊಂಡಿದ್ದ. ಇದಕ್ಕೂ ಮುನ್ನ ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾದ 2023-24ನೇ ಸಾಲಿನ ಆಯವ್ಯಯ ಪತ್ರದಲ್ಲಿ ಡಿಎಂಕೆ ಸರ್ಕಾರವು ಅರ್ಹ ಗೃಹಿಣಿಯರಿಗೆ ರೂ. 1,000 ಸಹಾಯ ಧನ ನೀಡುವುದಾಗಿ ಘೋಷಿಸಿತ್ತು.

ಇದನ್ನೂ ಓದಿ: ಮಗನ ನೆನಪುಗಳನ್ನು ಜೀವಂತವಾಗಿರಿಸಲು ಸಮಾಧಿ ಮೇಲೆ QR ಕೋಡ್‌ ಅಳವಡಿಸಿದ ಪೋಷಕರು!

Similar News