ಡಿಎಂಕೆ ಸರಕಾರವನ್ನು ಅಪಹಾಸ್ಯಗೈಯುವ ವೀಡಿಯೊ ಹಾಕಿದಾತನ ಬಂಧನ

Update: 2023-03-23 16:30 GMT

ಚೆನ್ನೈ, ಮಾ. 23: ಗೃಹಿಣಿಯರಿಗೆ ಮಾಸಿಕ 1,000 ರೂಪಾಯಿ ಭತ್ತೆ ನೀಡುವ ಯೋಜನೆಯೊಂದರ ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿ ಡಿಎಮ್ಕೆ ಸರಕಾರವನ್ನು ಅಪಹಾಸ್ಯಗೈಯುವ ವೀಡಿಯೊವೊಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವುದಕ್ಕಾಗಿ ತಮಿಳುನಾಡು ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಸಮುದಾಯಗಳ ನಡುವೆ ದ್ವೇಷವನ್ನು ಪ್ರಚೋದಿಸುವ, ಸಾರ್ವಜನಿಕ ಕೀಟಲೆ ಮಾಡುವ ಮತ್ತು ಮಹಿಳೆಯರ ಮರ್ಯಾದೆಗೆ ಧಕ್ಕೆ ತರುವ ಅಪರಾಧಗಳಿಗೆ ಸಂಬಂಧಿಸಿದ ಆರೋಪಗಳನ್ನು ಬಂಧಿತ ಪ್ರದೀಪ್ ವಿರುದ್ಧ ಹೊರಿಸಲಾಗಿದೆ. ವೀಡಿಯೊದಲ್ಲಿ ಹಳೆಯ ತಮಿಳು ಹಾಸ್ಯ ಚಿತ್ರವೊಂದರ ಪಾತ್ರಗಳ ಮೇಲೆ ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಮತ್ತು ಹಣಕಾಸು ಸಚಿವ ಪಳನಿವೇಳ್ ತ್ಯಾಗ ರಾಜನ್ರ ಹೆಸರುಗಳನ್ನು ಆರೋಪಿ ಬರೆದಿದ್ದಾರೆ ಎಂದು ಆರೋಪಿಸಲಾಗಿದೆ

Similar News