ವೃದ್ಧ ಆತ್ಮಹತ್ಯೆ
Update: 2023-03-23 22:10 IST
ಕುಂದಾಪುರ, ಮಾ.23: 70 ವರ್ಷ ಪ್ರಾಯದ ವೃದ್ಧರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದ ಕೋಟೇಶ್ವರದಿಂದ ವರದಿಯಾಗಿದೆ.
ಮೃತರನ್ನು ಕೋಟೇಶ್ವರ ಗ್ರಾಮ ಕುಂಬ್ರಿಯ ಪಂಜು ಪೂಜಾರಿ (70) ಎಂದು ಗುರುತಿಸಲಾಗಿದೆ.
ವಿಪರೀತ ಮದ್ಯ ಸೇವಿಸುವ ಚಟ ಹೊಂದಿದ್ದ ಇವರು ಇದರಿಂದ ಬೇಸತ್ತು, ಬುಧವಾರ ಅಪರಾಹ್ನ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಮಗ ಸತೀಶ್ ಪೂಜಾರಿ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.