'ಪರಿಣೀತಾ' ಖ್ಯಾತಿಯ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಪ್ರದೀಪ್ ಸರ್ಕಾರ್ ನಿಧನ

Update: 2023-03-24 04:37 GMT

ಹೊಸದಿಲ್ಲಿ: ಪರಿಣೀತಾ, ಹೆಲಿಕಾಪ್ಟರ್ ಈಲಾ ಹಾಗೂ  ಮರ್ದಾನಿ ಮುಂತಾದ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಖ್ಯಾತಿ ಪಡೆದಿದ್ದ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಪ್ರದೀಪ್ ಸರ್ಕಾರ್ ಅವರು 67 ನೇ ವಯಸ್ಸಿನಲ್ಲಿ ಶುಕ್ರವಾರ ನಿಧನರಾದರು.

ನಿರ್ದೇಶಕ ಹನ್ಸಲ್ ಮೆಹ್ತಾ ಅವರು ಶುಕ್ರವಾರ ಬೆಳಿಗ್ಗೆ ತಮ್ಮ ಟ್ವಿಟರ್ ಪ್ರೊಫೈಲ್‌ನಲ್ಲಿ ಈ  ಸುದ್ದಿ ಹಂಚಿಕೊಂಡಿದ್ದಾರೆ. "ಪ್ರದೀಪ್ ಸರ್ಕಾರ್. ದಾದಾ. RIP. ಎಂದು ಅವರು  ಬರೆದಿದ್ದಾರೆ.

ಬಾಲಿವುಡ್ ತಾರೆಯರು ಚಿತ್ರ ನಿರ್ಮಾಪಕ ಸರ್ಕಾರ್ ಗೆ ಶ್ರದ್ಧಾಂಜಲಿ ಸಲ್ಲಿಸಿದರು.

 ಪ್ರದೀಪ್ ಸರ್ಕಾರ್ ನಿಧನಕ್ಕೆ ಬಾಲಿವುಡ್ ನಟ  ಅಜಯ್ ದೇವಗನ್, ನಟ ಮನೋಜ್ ಬಾಜ್‌ಪೇಯಿ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ.

ಚಲನಚಿತ್ರಗಳಿಗೆ ಪ್ರವೇಶಿಸುವ ಮೊದಲು ಪ್ರದೀಪ್ ಸರ್ಕಾರ್ ಹಲವಾರು ಜನಪ್ರಿಯ ಸಂಗೀತ ವೀಡಿಯೊಗಳು ಹಾಗೂ  ಜಾಹೀರಾತುಗಳನ್ನು ನಿರ್ದೇಶಿಸಿದರು. ಅವರು 2005 ರಲ್ಲಿ ಮೊದಲ ಬಾರಿ ಪರಿಣೀತಾ ಚಿತ್ರಕ್ಕೆ  ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ವಿದ್ಯಾ ಬಾಲನ್, ಸೈಫ್ ಅಲಿ ಖಾನ್ ಹಾಗೂ  ಸಂಜಯ್ ದತ್ ಕಾಣಿಸಿಕೊಂಡಿದ್ದರು.

ಹಲವು ವರ್ಷಗಳಲ್ಲಿ, ಪ್ರದೀಪ್ ಸರ್ಕಾರ್  ಅವರು ಲಗಾ ಚುನಾರಿ ಮೇ ದಾಗ್, ಲಫಾಂಗೆ ಪರಿಂದೇ, ಮರ್ದಾನಿ ಮುಂತಾದ ಚಿತ್ರಗಳನ್ನು ಮಾಡಿದ್ದಾರೆ. ನಿರ್ದೇಶಕರಾಗಿ ಅವರ ಕೊನೆಯ ಪ್ರಾಜೆಕ್ಟ್ 2018 ರ ಚಲನಚಿತ್ರ ಹೆಲಿಕಾಪ್ಟರ್ ಈಲಾ.  ಇದರಲ್ಲಿ ಕಾಜೋಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

Similar News