ಕೋವಿಡ್-19 ವೇಳೆ ತುರ್ತು ಪರೋಲ್ ನಲ್ಲಿ ಬಿಡುಗಡೆಯಾದ ಎಲ್ಲಾ ಕೈದಿಗಳು 15 ದಿನಗಳಲ್ಲಿ ಶರಣಾಗಬೇಕು: ಸುಪ್ರೀಂಕೋರ್ಟ್

Update: 2023-03-24 07:19 GMT

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ ಆದೇಶಗಳ ಆಧಾರದ ಮೇಲೆ ಕೋವಿಡ್-19 ಅವಧಿಯಲ್ಲಿ ಉನ್ನತ ಅಧಿಕಾರ ಸಮಿತಿಯಿಂದ ತುರ್ತು ಪೆರೋಲ್‌ನಲ್ಲಿ ಬಿಡುಗಡೆಯಾದ ಎಲ್ಲಾ ಕೈದಿಗಳಿಗೆ 15 ದಿನಗಳಲ್ಲಿ ಶರಣಾಗುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.

"ಈ ನ್ಯಾಯಾಲಯವು ಹೊರಡಿಸಿದ ಆದೇಶಗಳನ್ನು ಅನುಸರಿಸಿ ಉನ್ನತ ಅಧಿಕಾರ ಸಮಿತಿಯ ಶಿಫಾರಸುಗಳ ಅನುಸಾರವಾಗಿ ತುರ್ತು ಪೆರೋಲ್ / ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾದ ಎಲ್ಲಾ ವಿಚಾರಣಾಧೀನ ಕೈದಿಗಳು ಹಾಗೂ  ಅಪರಾಧಿಗಳು 15 ದಿನಗಳ ಒಳಗಾಗಿ ಸಂಬಂಧಪಟ್ಟ ಜೈಲು ಅಧಿಕಾರಿಗಳ ಮುಂದೆ ಶರಣಾಗಬೇಕು" ಎಂದು. ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಸಿ.ಟಿ .ರವಿಕುಮಾರ್ ಅವರನ್ನೊಳಗೊಂಡ ಪೀಠ ಆದೇಶಿಸಿದೆ

ಸಂಬಂಧಪಟ್ಟ ಖೈದಿಗಳು ಸಂಬಂಧಪಟ್ಟ ಕಾರಾಗೃಹದ ಅಧಿಕಾರಿಗಳ ಮುಂದೆ ಶರಣಾದ ನಂತರ, ಸಕ್ಷಮ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಪ್ರಾರ್ಥಿಸಲು ಹಾಗೂ  ಅವರ ಅರ್ಜಿಗಳನ್ನು ಕಾನೂನಿನ ಪ್ರಕಾರ ಪರಿಗಣಿಸಲು ಸಂಬಂಧಪಟ್ಟ ವಿಚಾರಣಾಧೀನ ಕೈದಿಗಳಿಗೆ ಮುಕ್ತವಾಗಿರುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.

2020 ಮತ್ತು 2021 ರಲ್ಲಿ ಕೊರೋನದ ಒಂದು ಹಾಗೂ 2ನೇ ಅಲೆಯ ಸಂದರ್ಭದಲ್ಲಿ  ಜೈಲಿನಲ್ಲಿ ಜನಸಂದಣಿಯನ್ನು ತಪ್ಪಿಸಲು ಸುಪ್ರೀಂ ಕೋರ್ಟ್  ಸುಮೋಟೊ ಪ್ರಕರಣದಲ್ಲಿ ಖೈದಿಗಳಿಗೆ ತುರ್ತು ಪರೋಲ್ ನೀಡಿತ್ತು. ತುರ್ತು ಪರೋಲ್ ಅಗತ್ಯವಿರುವ ಕೈದಿಗಳನ್ನು ಗುರುತಿಸಲು ನ್ಯಾಯಾಲಯವು ಉನ್ನತ ಅಧಿಕಾರದ ಸಮಿತಿಯನ್ನು ರಚಿಸಲು ನಿರ್ದೇಶನ ನೀಡಿತ್ತು.

Similar News