ಅರ್ಹ ಕುಟುಂಬಗಳಿಗೆ ರಮಾಝಾನ್ ಕಿಟ್ ವಿತರಣೆ

Update: 2023-03-24 13:09 GMT

ಉಡುಪಿ : ಕುವೈತ್ ಮಣಿಪುರ ಮುಸ್ಲಿಮ್ ಅಸೋಶಿಯೇಶನ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಅರ್ಹ ಕುಟುಂಬಗಳಿಗೆ  ಆಹಾರ ಸಾಮಾಗ್ರಿಗಳ ರಮಾಝಾನ್ ಕಿಟ್‌ಗಳನ್ನು ವಿತರಿಸಲಾಯಿತು.‌

ಸಂಘದ ಗೌರವಾಧ್ಯಕ್ಷ ಸೈಯ್ಯದ್ ಅಹಮದ್ ಮಣಿಪುರ, ಅಧ್ಯಕ್ಷ ಜಮಾಲ್ ಮಣಿಪುರ, ಉಪಾಧ್ಯಕ್ಷ ಕರೀಮ್ ಉಚ್ಚಿಲ ನೇತೃತ್ವದಲ್ಲಿ ಹಾಗೂ ಸಂಘದ ಸರ್ವ ಸದಸ್ಯರುಗಳ ಸಹಕಾರದಿಂದ ಈ ಕಿಟ್ ವ್ಯವಸ್ಥೆ ಮಾಡಲಾಯಿತು. ಸದರ್ ಇಲ್ಯಾಸ್ ಅಲರಿ ಉಸ್ತಾದ್ ದುವಾ ನೆರವೇರಿಸಿದರು.  

ಸಂಘದ ಕೋಶಾಧಿಕಾರಿ ಶಂಶುದ್ಧೀನ್, ಮಜೀದ್ ಬಿರಾಲಿ ಉಚ್ಚಿಲ, ರಫೀಕ್ ಸಾಬ್ ಮಣಿಪುರ, ಸಲಾಂ ಮಣಿಪುರ, ಹಾರಿಸ್ ಸಂಸು ಮಣಿಪುರ, ಆಸಿಫ್, ಹಂಝ ಪೊಣ್ಣಾನಿ ಮೊದಲಾದವರು ಉಪಸ್ಥಿತರಿದ್ದರು.

Similar News