ಉಡುಪಿ: ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ವಂಚನೆ
Update: 2023-03-24 19:57 IST
ಉಡುಪಿ, ಮಾ.24: ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಕರೆ ಮಾಡಿ ಸಾವಿರಾರು ರೂ. ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಕ್ಕಟ್ಟೆಯ ಕೆ.ನಝೀಬ್ (66) ಎಂಬವರಿಗೆ ಮಾ.22ರಂದು ಮೊಬೈಲ್‌ಗೆ ಬಂದ ಸಂದೇಶದಲ್ಲಿದ್ದ ಮೊಬೈಲ್ ನಂಬರಿಗೆ ಕರೆ ಮಾಡಿದ್ದು, ಆಗ ಬ್ಯಾಂಕ್ ಅಧಿಕಾರಿ ಎಂದು ಹೇಳಿ ನಂಬಿಸಿದ ಅಪರಿಚಿತ ವ್ಯಕ್ತಿ, ಆಧಾರ್ ಕಾರ್ಡ್, ಎಂಟಿಎಂ ಕಾರ್ಡ್ ವಿವರ, ಓಟಿಪಿ ಪಡೆದು, ನಝೀಬ್ ಅವರ ಖಾತೆಯಿಂದ 96,403 ರೂ. ಹಣ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ಮೋಸ ಮಾಡಿರುವುದಾಗಿ ದೂರಲಾಗಿದೆ.