ಬಡ್ತಿಯಲ್ಲಿ ವಂಚನೆ: ಮಂಗಳೂರು ವಿವಿಯ ವಿರುದ್ಧ ಜಿಲ್ಲಾ ಮರಾಟಿ ಸಮಿತಿ ಆರೋಪ

Update: 2023-03-24 16:17 GMT

ಮಂಗಳೂರು, ಮಾ.24: ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಸ್‌ಸಿ/ಎಸ್‌ಟಿ ನೌಕರರಿಗೆ ಬಡ್ತಿ ವಂಚಿಸಿದ್ದಾರೆ. ಈ ಪ್ರಕರಣದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದರೆ ಅವರು ಎಫ್‌ಐಆರ್ ದಾಖಲಿಸಿಕೊಳ್ಳುತ್ತಿಲ್ಲ ಎಂದು ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ)ನ ಅಧ್ಯಕ್ಷ ಆಶೋಕ್ ನಾಯ್ಕ್ ನಗರದ ಲೇಡಿಹಿಲ್ ನ  ಪತ್ರಿಕಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಸ್‌ಸಿ/ಎಸ್‌ಟಿ ವಿದ್ಯಾಥಿಗರ್ಳಿಗೆ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಮಂಗಳೂರು ವಿವಿಗೆ ಕೋಟ್ಯಾಂತರ ರೂಪಾಯಿಗಳ ಅನುದಾನನ್ನು ನೀಡಿದ್ದು ಅದರಲ್ಲಿ ಲ್ಯಾಪ್‌ಟಾಪ್ ಖರೀದಿಯೂ ಒಂದು. ವಿ.ವಿ ಯಿಂದ ಕಡಿಮೆ ದರದ 200 ಲ್ಯಾಪ್ ಟಾಪ್ ಗಳನ್ನು  97,000 ರೂ. ದರ ನಿಗದಿಪಡಿಸಿ ಖರೀದಿಸಿದ್ದಾರೆ. ಆದರೆ ಈವರೆಗೂ ಎಸ್‌ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ನೀಡಿಲ್ಲ.

ಲ್ಯಾಪ್‌ಟಾಪ್‌ಗಳ ಗುಣಮಟ್ಟದ ವರದಿ ಬಗ್ಗೆ ಅನುಮಾನವಿದೆ. ಶೆಕ್ಷಣಿಕ ಅವಧಿ ಪೂರ್ಣಗೊಳಿಸಿರುವ ಎಸ್ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ ಲ್ಯಾಪ್‌ಟಾಪ್‌ಗಳ  ನೈಜ ಮಾರುಕಟ್ಟೆ ಬೆಲೆ 56,000 ರೂ. ಆದರೆ, ಮಂಗಳೂರು ವಿವಿ  ಲ್ಯಾಪ್‌ಟಾಪ್‌ಗಳನ್ನು 97,000ರೂ.ಗಳಿಗೆ ಖರೀದಿಸಿರುವ ದರ ವನ್ನು ಗಮನಿಸಿದರೆ ವಿದ್ಯಾರ್ಥಿಗಳ ಶೈಕ್ಷಣಿಕ ಸೌಲಭ್ಯಕ್ಕೆ ಹಾಗೂ ಸರಕಾರಕ್ಕೆ ವಂಚಿಸಿದೆ. ಇಂಜಿನಿಯರಿಂಗ್ ವಿಭಾಗದ ತಾಂತ್ರಿಕ ವೃಂದಗಳ ಎಸ್‌ಸಿ/ಎಸ್‌ಟಿ ನೌಕರರಿಗೆ ಸೇವಾ ಅವಧಿಯ ಶಾಶ್ವತ ಬಡ್ತಿಯನ್ನು ನೀಡದೆ ವಂಚಿಸಿದ್ದಾರೆ. ಶಿಪ್ಟ್ ಮೆಕಾನಿಕ್ ಮತ್ತು ತಾಂತ್ರಿಕ ವೃಂದದ ಮುಂಬಡ್ತಿಗೆ ಪರಿಶಿಷ್ಟ ನೌಕರರು ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಕಡೆಗಣಿಸಿ ಆಡಳಿತಾ ತ್ಮಕವಾಗಿ ದೌರ್ಜನ್ಯ ಎಸಗಿದ್ದಾರೆ. ನೇಮಕಾತಿ ಅಧಿಸೂಚನೆಯ ಬಡ್ತಿಯಲ್ಲಿ ಎಸ್‌ಟಿ ಮೀಸಲಾತಿ ಯನ್ನು ಪರಿಗಣಿಸದೆ ಸರ್ಕಾರದ ನಿಯಮವನ್ನು ಉಲ್ಲಂಘಿಸಿದ್ದಾರೆ. ಅಲ್ಲದೆ ಅಧಿಕಾರವನ್ನು ದುರುಪಯೋಗಪಡಿಸಿ ವೃಂದಗಳ ಬಡ್ತಿ ಪ್ರಕ್ರಿಯೆ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಕೈ ಬಿಟ್ಟು ಅಕ್ರಮವೆಸಗಿದ್ದಾರೆ. ಮಂಗಳೂರು ವಿವಿಯ ಆಡಳಿತ ಅಧಿಕಾರಿ ಮತ್ತು ಸಿಬ್ಬಂದಿಗಳು ಮುಖ್ಯಮಂತ್ರಿ ಆಯೋಗಕ್ಕೆ ಸುಳ್ಳು ಮಾಹಿತಿಯನ್ನು ನೀಡಿ, ಪರಿಶಿಷ್ಟರಿಗೆ ದೌರ್ಜನ್ಯ ನಡೆಸಿರುವುದು ಆರ್‌ಟಿಐ ಮೂಲಕ ದೊರೆತ ದಾಖಲೆಯಲ್ಲಿ ವಾಗಿದೆ. ಕುಲಪತಿಗಳು 2 ತಿಂಗಳುಗಳ ನಂತರ ನಿವೃತ್ತಿ ಹೊಂದುತ್ತಿರುವುದರಿಂದ ಲೋಕಾಯುಕ್ತಕ್ಕೆ ದಾಖಲೆಗಳನ್ನು ಒಪ್ಪಿಸಿ ದೂರು ದಾಖಲಿಸಿ ಕೊಳ್ಳುತ್ತೇವೆ. ಅಲ್ಲದೆ ಹೈ ಕೋರ್ಟ್ ನಲ್ಲೂ ದಾವೆಯನ್ನು ಹೂಡುವುದಾಗಿ ತಿಳಿಸಿದ್ದಾರೆ.

ಈ ಮುಖ್ಯ ಪ್ರಕರಣಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಅಶೋಕ್ ನಾಯ್ಕ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿ (ರಿ) ಕಾರ್ಯದರ್ಶಿಗಳಾದ ಗಂಗಾಧರ್, ಜಯ ಪ್ರಕಾಶ್ ಹಾಗೂ ಸದಸ್ಯರಾದ ರತ್ನಾವತಿ ಮತ್ತು ರೇವತಿ ಯ ಉಪಸ್ಥಿತರಿದ್ದರು.

Similar News