ರಾಹುಲ್‌ ಗಾಂಧಿ ಪ್ರಕರಣವನ್ನು ಗಮನಿಸುತ್ತಿದ್ದೇವೆ, ನ್ಯಾಯಾಂಗ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಆಧಾರಸ್ಥಂಭ: ಅಮೆರಿಕ

Update: 2023-03-28 07:00 GMT

ಹೊಸದಿಲ್ಲಿ: ಕಾನೂನಿಗೆ ಗೌರವ ಮತ್ತು ನ್ಯಾಯಾಂಗದ ಸ್ವಾತಂತ್ರ್ಯವು ಯಾವುದೇ ಪ್ರಜಾಪ್ರಭುತ್ವದ ಮೂಲ ಆಧಾರಸ್ಥಂಭವಾಗಿದೆ ಎಂದು ಅಮೆರಿಕ ಹೇಳಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರನ್ನು ಮಾನನಷ್ಟ ಪ್ರಕರಣವೊಂದರಲ್ಲಿ ನ್ಯಾಯಾಲಯ ದೋಷಿಯೆಂದು ಘೋಷಿಸಿ ಎರಡು ವರ್ಷ ಶಿಕ್ಷೆ ಪ್ರಕಟಿಸಿದ ಬೆನ್ನಲ್ಲೇ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಕ್ರಮದ ಕುರಿತು ಅಮೆರಿಕ ಮಂಗಳವಾರ ಪ್ರತಿಕ್ರಿಯಿಸಿ ಮೇಲಿನಂತೆ ಹೇಳಿಕೆ ಬಿಡುಗಡೆಗೊಳಿಸಿದೆ.

"ಭಾರತೀಯ ಕೋರ್ಟುಗಳಲ್ಲಿ ರಾಹುಲ್‌ ಗಾಂಧಿ ಪ್ರಕರಣದ ಕುರಿತು ನಾವು ಗಮನಿಸುತ್ತಿದ್ದೇವೆ ಹಾಗೂ  ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತಂತೆ ನಮ್ಮ ಹಂಚಿತ ಬದ್ಧತೆಯ ಕುರಿತಂತೆ ಭಾರತ ಸರ್ಕಾರದ ಜೊತೆ ಮಾತನಾಡುತ್ತೇವೆ. ನಮ್ಮ ಭಾರತೀಯ ಪಾಲುದಾರರ ಜೊತೆ ಮಾತುಕತೆಗಳ ವೇಳೆ ನಾವು  ಪ್ರಜಸತ್ತಾತ್ಮಕ ತತ್ವಗಳ, ಮಾನವ ಹಕ್ಕುಗಳ ರಕ್ಷಣೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಒತ್ತಿ ಹೇಳುತ್ತೇವೆ ಹಾಗೂ ಇವುಗಳು ನಮ್ಮ ಪ್ರಜಾಪ್ರಭುತ್ವಗಳನ್ನು ಬಲವರ್ಧಿಸಲು ಪ್ರಮುಖ ಪಾತ್ರ ವಹಿಸಲಿವೆ," ಎಂದು ಅಮೆರಿಕಾದ ಡಿಪಾರ್ಟ್‌ಮೆಂಟ್‌ ಆಫ್‌ ಸ್ಟೇಟ್‌ನ ಮುಖ್ಯ ಉಪವಕ್ತಾರ ವೇದಾಂತ್‌ ಪಟೇಲ್‌ ಹೇಳಿದ್ದಾರೆ.

ಇದನ್ನೂ ಓದಿ: ​ಮನವಿ ಮಾಡದಿದ್ದರೂ ಎಸ್‌ಬಿಐಗೆ 8,800 ಕೋಟಿ ನೆರವು ನೀಡಿದ ಕೇಂದ್ರ ಸರ್ಕಾರ!

Similar News