ವಯನಾಡ್‌ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸದ ಚುನಾವಣಾ ಆಯೋಗ: ಅವಸರವಿಲ್ಲ ಎಂದ ಆಯುಕ್ತರು

Update: 2023-03-29 08:42 GMT

ಹೊಸದಿಲ್ಲಿ: ಇಂದು ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕಗಳನ್ನು ಘೋಷಿಸಿದ ಚುನಾವಣಾ ಆಯೋಗ ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸಿಲ್ಲ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರ ರಾಹುಲ್‌ ಅವರ ಸಂಸತ್‌ ಸದಸ್ಯತ್ವವು ಮಾನನಷ್ಟ ಪ್ರಕರಣದಲ್ಲಿ ಅವರು ನ್ಯಾಯಾಲಯದಿಂದ ದೋಷಿ ಎಂದು ಘೋಷಿತರಾಗಿ ಎರಡು ವರ್ಷ ಜೈಲು ಶಿಕ್ಷೆಯನ್ನು ಅವರಿಗೆ ಪ್ರಕಟಿಸಿರುವುದರಿಂದ ರದ್ದುಗೊಂಡಿರುವುದರಿಂದ ಖಾಲಿ ಬಿದ್ದಿದೆ.

"ಒಂದು ಕ್ಷೇತ್ರ ಖಾಲಿ ಬಿದ್ದ ನಂತರ ಅದಕ್ಕೆ ಚುನಾವಣೆ ಘೋಷಿಸಲು ಆರು ತಿಂಗಳ ಕಾಲಾವಕಾಶವಿದೆ, ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಅಪೀಲು ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿದೆ. ಯಾವುದೇ ಅವಸರವಿಲ್ಲ," ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಹೇಳಿದರು.

"ಒಂದು ಕ್ಷೇತ್ರ ಖಾಲಿ ಬಿದ್ದು ಬಾಕಿ ಅವಧಿ ಒಂದು ವರ್ಷಕ್ಕಿಂತ ಕಡಿಮೆ ಇದ್ದರೆ ಉಪಚುನಾವಣೆ ನಡೆಯುವುದಿಲ್ಲ, ಆದರೆ ವಯನಾಡಿಗೆ ಒಂದು ವರ್ಷಕ್ಕಿಂತ ಹೆಚ್ಚು ಅವಧಿ ಬಾಕಿಯಿದೆ," ಎಂದು ಅವರು ಹೇಳಿದರು.

Similar News