ದಿಲ್ಲಿಯಲ್ಲಿ ಅಗ್ನಿ ಅವಘಡ: ಒಂದೇ ಕುಟುಂಬದ ಆರು ಮಂದಿ ಮೃತ್ಯು

Update: 2023-03-31 07:18 GMT

ಹೊಸದಿಲ್ಲಿ: ದಿಲ್ಲಿಯ ಶಾಸ್ತ್ರಿ ಪಾರ್ಕ್ ನಿವಾಸದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಜನರು ಸುಟ್ಟ ಗಾಯಗಳು ಹಾಗೂ  ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಸುಡುವ ಸೊಳ್ಳೆ ಕಾಯಿಲ್ ವೊಂದು  ರಾತ್ರಿಯ ಸಮಯದಲ್ಲಿ ಹಾಸಿಗೆಯ ಮೇಲೆ ಬಿದ್ದಿದೆ. ವಿಷಕಾರಿ ಹೊಗೆಯ ಪರಿಣಾಮವಾಗಿ ಕುಟುಂಬದ ಸದಸ್ಯರು ಪ್ರಜ್ಞೆಯನ್ನು ಕಳೆದುಕೊಂಡರು.  ಇದು ಅವರ ಸಾವಿಗೆ ಕಾರಣವಾಯಿತು.

ಮೃತಪಟ್ಟ ಆರು ಜನರಲ್ಲಿ ನಾಲ್ವರು ವಯಸ್ಕ ಪುರುಷರು, ಓರ್ವ ಮಹಿಳೆ ಹಾಗೂ ಒಂದು ಮಗು ಸೇರಿದೆ. ಇನ್ನಿಬ್ಬರು ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಓರ್ವನನ್ನು ಪ್ರಥಮ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ.

ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ

Similar News