×
Ad

ಪ್ರಧಾನಿ ಮೋದಿ ಅವರ ಎಂಎ ಪದವಿಯ ವಿವರ ನೀಡುವ ಅಗತ್ಯವಿಲ್ಲ: ಗುಜರಾತ್ ಹೈಕೋರ್ಟ್

ಮಾಹಿತಿ ಕೇಳಿದ್ದಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೆ 25 ಸಾವಿರ ದಂಡ

Update: 2023-03-31 15:19 IST

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಎಂಎ ಪದವಿಗೆ ಸಂಬಂಧಿಸಿದ ಮಾಹಿತಿಯನ್ನು ಕಲೆ ಹಾಕಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ನೀಡುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿದ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) 2016 ರ ಆದೇಶವನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ  ರದ್ದುಗೊಳಿಸಿದೆ. ಪ್ರಧಾನಿ ಮೋದಿ ಅವರ  ಪದವಿಗಳ ಕುರಿತು ಮಾಹಿತಿ ನೀಡುವ ಅಗತ್ಯವಿಲ್ಲ ಎಂದಿದೆ.

ಪ್ರಧಾನಿಯವರ ಪದವಿಯ ವಿವರ ಕೇಳಿದ್ದಕ್ಕಾಗಿ  ದಿಲ್ಲಿ  ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಗುಜರಾತ್ ಹೈಕೋರ್ಟ್ 25,000  ರೂ. ದಂಡ ವಿಧಿಸಿದೆ.

 ಕೇಜ್ರಿವಾಲ್ ಅವರು ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಹಣವನ್ನು ಠೇವಣಿ ಮಾಡಬೇಕು.

2016ರಲ್ಲಿ ಪ್ರಧಾನಿ ಮೋದಿಯವರ ಸ್ನಾತಕೋತ್ತರ ಪದವಿಯ ಮಾಹಿತಿಯನ್ನು ನೀಡುವಂತೆ ಕೇಂದ್ರ ಮಾಹಿತಿ ಆಯೋಗವು ಗುಜರಾತ್ ವಿಶ್ವವಿದ್ಯಾಲಯಕ್ಕೆ ಸೂಚಿಸಿತ್ತು

Similar News