ಸೈಕಲ್‌ನಲ್ಲಿ ಕನ್ಯಾಕುಮಾರಿಗೆ ಯಾತ್ರೆ ನಡೆಸಿದ ಕಲ್ಯಾಣಪುರ ಮಿಲಾಗ್ರಿಸ್‌ನ ದಿನೇಶ

Update: 2023-03-31 16:13 GMT

ಕಲ್ಯಾಣಪುರ, ಮಾ.31: ಇಲ್ಲಿನ ಮಿಲಾಗ್ರಿಸ್ ಕಾಲೇಜಿನ ಬಿ.ಎ. ಮೂರನೇ ವರ್ಷದ ವಿದ್ಯಾರ್ಥಿ ದಿನೇಶ ಸೈಕಲ್‌ನಲ್ಲಿ  ಭಾರತದ ದಕ್ಷಿಣ ಕೊನೆಯಾದ ಕನ್ಯಾಕುಮಾರಿಗೆ ಹೋಗಿ ಮರಳಿ ಬಂದಿದ್ದಾರೆ.

ಕಲ್ಯಾಣಪುರದ ಕಾಲೇಜ್ ಕ್ಯಾಂಪಸ್‌ನಿಂದ ಮಾ.11ರಂದು ಕನ್ಯಾಕುಮಾರಿ ಯತ್ತ ಪ್ರಯಾಣ ಬೆಳೆಸಿದ ದಿನೇಶ, 1500 ಕಿ.ಮೀ. ದೂರವನ್ನು 20 ದಿನಗಳಲ್ಲಿ ಕ್ರಮಿಸಿ ಕಾಲೇಜಿಗೆ ಆಗಮಿಸಿದಾಗ ಅವರ ತಾಯಿ ಪಾರ್ವತಿ ಬೋವಿ ಅವರ ಉಪಸ್ಥಿತಿಯಲ್ಲಿ ಕಾಲೇಜಿನ ವತಿಯಿಂದ ಸ್ವಾಗತಿಸಲಾಯಿತು.

ತನ್ನ ಕಾಲೇಜು ವಿದ್ಯಾರ್ಥಿಯನ್ನು ಮಂಗಳೂರಿನಲ್ಲಿ ಸ್ವಾಗತಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವ, ಅಲ್ಲಿಂದ ಸೈಕಲ್‌ನಲ್ಲಿ ಅವರೊಂದಿಗೆ ಕಾಲೇಜಿಗೆ ಆಗಮಿಸಿದರು.

ಕಾಲೇಜಿನ ಇಂಥ ಅಪರೂಪದ, ಅಪೂರ್ವ ಪ್ರತಿಭೆಗಳನ್ನು ಕಾಲೇಜು ಯಾವತ್ತೂ ಪ್ರೋತ್ಸಾಹಿಸಿ, ಬೆಂಬಲಿಸುತ್ತದೆ. ಇಂಥ ಅಪರೂಪದ ಪ್ರತಿಭೆಗಳು ಅರಳಲು ಬೇಕಾದ ಎಲ್ಲಾ ಬೆಂಬಲವನ್ನು ನೀಡಲಾಗುತ್ತದೆ. ಕಾಲೇಜಿನಲ್ಲಿ ಓದಿನೊಂದಿಗೆ ಇಂಥ ಅಪೂರ್ವ ಸಾಧನೆ ಮಾಡುವವರಿಗೆ ಸದಾ ಪ್ರೋತ್ಸಾಹ ಇದ್ದೇ ಇರುತ್ತದೆ ಎಂದರು.

ದಿನೇಶ್ ಅವರು ಕುಂದಾಪುರ ತಾಲೂಕಿನ ಕಮಲಶಿಲೆಯ ಶೇಷು ಬೋವಿ ಹಾಗೂ ಪಾರ್ವತಿ ಬೋವಿ ಇವರ ಪುತ್ರ.

Similar News