ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಚೆನ್ನೈ ಕಲಾಕ್ಷೇತ್ರದ ಪ್ರೊಫೆಸರ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ

Update: 2023-04-01 04:49 GMT

ಚೆನ್ನೈ: ಸಂತ್ರಸ್ತ  ಮಾಜಿ ವಿದ್ಯಾರ್ಥಿನಿಯೊಬ್ಬರು ಲೈಂಗಿಕ ಕಿರುಕುಳದ ದೂರು ನೀಡಿದ ನಂತರ ಪ್ರತಿಷ್ಠಿತ ಶಾಸ್ತ್ರೀಯ ಕಲೆಗಳ ಸಂಸ್ಥೆಯಾದ ಚೆನ್ನೈನ ಕಲಾಕ್ಷೇತ್ರದ ಸಹಾಯಕ ಪ್ರಾಧ್ಯಾಪಕರ ವಿರುದ್ಧ ಚೆನ್ನೈ ಪೊಲೀಸರು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.

 ಕಲಾಕ್ಷೇತ್ರದಲ್ಲಿ ಆಗುತ್ತಿರುವ   ಲೈಂಗಿಕ ಕಿರುಕುಳ ಹಾಗೂ  ಮೌಖಿಕ ನಿಂದನೆಗೆ ಸಂಬಂಧಿಸಿ  ಸುಮಾರು 200 ವಿದ್ಯಾರ್ಥಿ, ವಿದ್ಯಾರ್ಥಿನಿಯರುಗಳು ಪ್ರತಿಭಟನೆ ಆರಂಭಿಸಿದ ಕೆಲ ದಿನಗಳ ನಂತರ ಇಂದು ಹರಿ ಪದ್ಮನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಹಿಂದೆ, ರಾಷ್ಟ್ರೀಯ ಮಹಿಳಾ ಆಯೋಗವು ಈ ಆರೋಪಗಳನ್ನು ತಪ್ಪು ಮಾಹಿತಿ ಅಭಿಯಾನ ಎಂದು ಕರೆದಿತ್ತು.

ಸುಮಾರು 90 ವಿದ್ಯಾರ್ಥಿಗಳು ನಿನ್ನೆ ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥರಿಗೆ ದೂರು ನೀಡಿದ್ದರು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭರವಸೆ ನೀಡಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಈ ಆರೋಪಗಳನ್ನು ಆಧಾರ ರಹಿತ ಎಂದು ತಳ್ಳಿ ಹಾಕಿತ್ತು.

ಕಲಾಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಲೈಂಗಿಕ ಕಿರುಕುಳ, ತಾರತಮ್ಯ ನಡೆಯುತ್ತಿದೆ. ಆಡಳಿತ ಮಂಡಳಿಯು ತಮ್ಮ ದೂರುಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದೆ ಎಂದು ವಿದ್ಯಾರ್ಥಿಗಳು  ಆರೋಪಿಸಿದರು.

ಗುರುವಾರ ವಿದ್ಯಾರ್ಥಿಗಳು    ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಪತ್ರ ಬರೆದು, ನಿರ್ದೇಶಕಿ ರೇವತಿ ರಾಮಚಂದ್ರನ್ ಅವರನ್ನು  ವಜಾಗೊಳಿಸುವಂತೆ ಹಾಗೂ  ಆಂತರಿಕ ದೂರು ಸಮಿತಿಯನ್ನು ಪುನರ್ರಚಿಸಬೇಕು ಎಂದು ಕೋರಿದರು.

Similar News