ಬಿಹಾರದ ಸಸಾರಾಮ್‌ ನಲ್ಲಿ ರಾಮನವಮಿ ನಂತರ ಉದ್ವಿಗ್ನ ಪರಿಸ್ಥಿತಿ: ಅಮಿತ್‌ ಶಾ ಕಾರ್ಯಕ್ರಮ ರದ್ದು

Update: 2023-04-01 10:57 GMT

ಪಾಟ್ನಾ: ಶುಕ್ರವಾರ ರಾಮ ನವಮಿ ಸಂದರ್ಭ ಉಂಟಾದ ಕೋಮು ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಬಿಹಾರದ (Bihar) ಸಸಾರಾಮ್‌ನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅಲ್ಲಿಗೆ ಭೇಟಿ ನೀಡುವ ತಮ್ಮ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ.

ಶನಿವಾರ ಸಂಜೆ ಪಾಟ್ನಾಗೆ ಆಗಮಿಸಲಿರುವ ಶಾ, ರವಿವಾರ ನವಾಡ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ರಾಜಾ ಅಶೋಕನ ಜನ್ಮದಿನಾಚರಣೆ ಆಚರಣೆಗೆಂದು ಅಮಿತ್‌ ಶಾ ಸಸಾರಾಮ್‌ಗೆ ನಾಳೆ ತೆರಳಲಿದ್ದರು. ಶಾ ಅವರ ಕಾರ್ಯಕ್ರಮ ರದ್ದತಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇರ ಕಾರಣ ಎಂದು  ರಾಜ್ಯ ಬಿಜೆಪಿ ಅಧ್ಯಕ್ಷ ಸಾಮ್ರಾಟ್‌ ಚೌಧುರಿ ಆರೋಪಿಸಿದ್ದಾರೆ.

"ನಿತೀಶ್‌ ಕುಮಾರ್‌ ಅವರಿಗೆ ಆಡಳಿತದ ಮೇಲೆ ನಿಯಂತ್ರಣವಿಲ್ಲ. ಮುಖ್ಯಮಂತ್ರಿಯ ತವರು ಜಿಲ್ಲೆಯಾದ ನಲಂದಾದಲ್ಲಿರುವ ಶರೀಫ್‌ ಕೂಡ ಉದ್ವಿಗ್ನವಾಗಿದೆ. ರಾಜ್ಯದ ಇತರ ಸ್ಥಳಗಳಲ್ಲಿಯೂ ಪರಿಸ್ಥಿತಿ ಅದೇ ಆಗಿದೆ," ಎಂದು ಅವರು ಹೇಳಿದರು.

ಉದ್ವಿಗ್ನತೆಯ ಹಿನ್ನೆಯಲ್ಲಿ ಹೆಚ್ಚುವರಿ ಪೊಲೀಸ್‌ ಪಡೆಗಳನ್ನು ಒದಗಿಸಲು ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಮುಂದೆ ಬಂದಿದ್ದರೂ ಇಡೀ ಆಡಳಿತ ವ್ಯವಸ್ಥೆ ನಿದ್ದೆಯಲ್ಲಿರುವಂತಿದೆ ಎಂದು ಚೌಧುರಿ ಆರೋಪಿಸಿದರು.

"ಸಸಾರಾಮ್‌ನಲ್ಲಿ ಸೆಕ್ಷನ್‌ 144 ಹೇರಲಾಗಿರುವುದರಿಂದ ದೊಡ್ಡ ಸಭೆಗಳು ನಡೆಯುವ ಸಾಧ್ಯತೆಯಿಲ್ಲದೇ ಇರುವುದರಿಂದ ಶಾ ಅವರ ಕಾರ್ಯಕ್ರಮ ರದ್ದಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ನ್ಯಾಯಾಲಯದಿಂದ ದಂಡಕ್ಕೆ ಗುರಿಯಾದರೂ ಪ್ರಧಾನಿಯ ಪದವಿ ಕುರಿತು ಮತ್ತೆ ಪ್ರಶ್ನಿಸಿದ ಅರವಿಂದ್ ಕೇಜ್ರಿವಾಲ್

Similar News