ಐಪಿಎಲ್: ಕೆಕೆಆರ್‌ಗೆ 192 ರನ್ ಗುರಿ ನೀಡಿದ ಪಂಜಾಬ್ ಕಿಂಗ್ಸ್

Update: 2023-04-01 11:59 GMT

ಮೊಹಾಲಿ,ಎ.1: ಭಾನುಕ ರಾಜಪಕ್ಸ ಅರ್ಧಶತಕದ(50 ರನ್, 32 ಎಸೆತ)ಕೊಡುಗೆಯ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಐಪಿಎಲ್‌ನ 2ನೇ ಪಂದ್ಯದ ಗೆಲುವಿಗೆ 192 ರನ್ ಗುರಿ ನೀಡಿದೆ.

ಶನಿವಾರ ಟಾಸ್ ಜಯಿಸಿದ ಕೆಕೆಆರ್ ನಾಯಕ ನಿತೀಶ್ ರಾಣಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಮೊದಲಿಗೆ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಪಂಜಾಬ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 191 ರನ್ ಗಳಿಸಿದೆ.

ಪ್ರಭ್‌ಸಿಮ್ರಾನ್ ಸಿಂಗ್(23 ರನ್)ಬೇಗನೆ ಔಟಾದರು. ಆಗ 2ನೇ ವಿಕೆಟಿಗೆ 86 ರನ್ ಜೊತೆಯಾಟ ನಡೆಸಿದ ರಾಜಪಕ್ಸ ಹಾಗೂ ನಾಯಕ ಶಿಖರ್ ಧವನ್(40 ರನ್, 29 ಎಸೆತ)ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

ಆಲ್‌ರೌಂಡರ್ ಸ್ಯಾಮ್ ಕರನ್(ಔಟಾಗದೆ 26), ಜಿತೇಶ್ ಶರ್ಮಾ(21 ರನ್), ಸಿಕಂದರ್ ರಝಾ(16 ರನ್) ಹಾಗೂ ಶಾರೂಖ್ ಖಾನ್ (ಔಟಾಗದೆ 11)ಎರಡಂಕೆಯ ಸ್ಕೋರ್ ಗಳಿಸಿದರು.

ಕೆಕೆಆರ್ ಪರ ಟಿಮ್ ಸೌಥಿ (2-54)ಎರಡು ವಿಕೆಟ್ ಪಡೆದರು.
 

Similar News