ರಾಹುಲ್‌ ಗಾಂಧಿ ಅನರ್ಹತೆ ವಿಚಾರ: ಯುರೋಪಿಯನ್‌ ಯೂನಿಯನ್‌ ಹೇಳಿದ್ದೇನು?

Update: 2023-04-01 12:58 GMT

 ಹೊಸದಿಲ್ಲಿ: ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವ ಕ್ರಮವನ್ನು ತಾನು ನಿಕಟವಾಗಿ ಗಮನಿಸುತ್ತಿರುವುದಾಗಿ ಯುರೋಪಿಯನ್‌ ಯೂನಿಯನ್‌ ಹೇಳಿದೆ. ಅಮೆರಿಕಾ ಮತ್ತು ಜರ್ಮನಿ ಕೂಡ ಇದೇ ರೀತಿಯ ಹೇಳಿಕೆಗಳನ್ನು ನೀಡಿದ ಬೆನ್ನಿಗೇ ಯುರೋಪಿಯನ್‌ ಯೂನಿಯನ್‌ ಹೇಳಿಕೆ ಭಾರತ ಸರ್ಕಾರಕ್ಕೆ ಮುಜುಗರ ತಂದಿದೆ.

"ರಾಹುಲ್‌ ಗಾಂಧಿ ಅವರ ವಿರುದ್ಧದ ಪ್ರಕರಣ ಮತ್ತು ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿರುವುದನ್ನು ಯುರೋಪಿಯನ್‌  ಯೂನಿಯನ್‌ ನಿಕಟವಾಗಿ ಗಮನಿಸುತ್ತಿದೆ  ಆದರೆ ನ್ಯಾಯಾಲಯದಲ್ಲಿ ಪ್ರಕರಣವಿರುವುದರಿಂದ ನಾವು ಯಾವುದೇ ಹೇಳಿಕೆ ನೀಡುವುದಿಲ್ಲ," ಎಂದು ಯೂನಿಯನ್‌ನ ವಿದೇಶ ವ್ಯವಹಾರಗಳ ಮತ್ತು ಭದ್ರತಾ ನೀತಿ ಪ್ರಮುಖ ವಕ್ತಾರ ಪೀಟರ್‌ ಸ್ಟಾನೊ ಹೇಳಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಜರ್ಮನಿಯ ವಿದೇಶಾಂಗ ಸಚಿವಾಲಯದ ವಕ್ತಾರರು ಪ್ರತಿಕ್ರಿಯಿಸಿ, ಈ ಪ್ರಕರಣದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಮೂಲಭೂತ ಪ್ರಜಾಸತ್ತಾತ್ಮಕ ತತ್ವಗಳು ಅನ್ವಯವಾಗುತ್ತವೆ ಎಂದು ನಿರೀಕ್ಷಿಸುವುದಾಗಿ ಹೇಳಿದ್ದರು.

ಇದನ್ನೂ ಓದಿ: ರಾಹುಲ್‌ ಗಾಂಧಿ ವಿರುದ್ಧ ಇನ್ನೊಂದು ಮಾನನಷ್ಟ ಪ್ರಕರಣ ದಾಖಲು

Similar News