ಉದ್ಯಾನ ನಗರಿ ಬೆಂಗಳೂರು ಪ್ರಕೃತಿ ಜೊತೆ ಹೊಂದಿರುವ ಸಂಬಂಧವನ್ನು ಶ್ಲಾಘಿಸಿ ಟ್ವಿಟರ್ ಥ್ರೆಡ್‌ ಶೇರ್‌ ಮಾಡಿದ ಪ್ರಧಾನಿ

Update: 2023-04-01 13:01 GMT

ಹೊಸದಿಲ್ಲಿ:  ಬೆಂಗಳೂರಿನ ಸುಂದರ ಗಿಡಮರಗಳ ಕುರಿತು ಪ್ರಕೃತಿ ಪ್ರೇಮಿಯೊಬ್ಬರ ಟ್ವಿಟ್ಟರ್‌ ಥ್ರೆಡ್‌ ಅನ್ನು ಇಂದು ಶೇರ್‌ ಮಾಡಿದ ಪ್ರಧಾನಿ ನರೇಂದ್ರ ಮೋದಿ ಉದ್ಯಾನ ನಗರಿ ಬೆಂಗಳೂರನ್ನು ಪ್ರಕೃತಿ ಜೊತೆಗಿನ ಅದರ ಅವಿನಾಭಾವ ಬೆಸುಗೆಗಾಗಿ ಶ್ಲಾಘಿಸಿದ್ದಾರೆ.

ಪ್ರಕೃತಿ ಪ್ರೇಮಿ, ಕಲಾವಿದೆ, ಉದ್ಯಾನವನ ಬೆಳೆಸುವ ಆಸಕ್ತಿ ಹೊಂದಿರುವ ಸುಭಾಷಿಣಿ ಚಂದ್ರಮಣಿ ಎಂಬವರು ಬೆಂಗಳೂರಿನಲ್ಲಿ ವಿವಿಧ ಋತುಗಳಲ್ಲಿ ಅರಳುವ ಹೂವುಗಳ ಗಿಡ ಮರಗಳ ಚಿತ್ರಣದ ಕುರಿತು ಪೋಸ್ಟ್‌ ಮಾಡಿದ್ದರು. ಬೆಂಗಳೂರಿನಲ್ಲಿ ಅರಳುವ ನಾಗಲಿಂಗ ಹೂವು, ಅಲ್ಲಿನ ನೈಲ್‌ ಟ್ಯುಲಿಪ್‌ ಮರ, ಪೋರ್ಶಿಯಾ ಮರ ಮುಂತಾದವುಗಳ ಬಗ್ಗೆ ಸುಭಾಷಿಣಿ ಬರೆದಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ, "ಬೆಂಗಳೂರು ಮತ್ತು ಅದರ ಮರಗಳ ಕುರಿತು ಇದೊಂದು ಆಸಕ್ತಿಕರ ಥ್ರೆಡ್.‌ ಬೆಂಗಳೂರಿಗೆ ಮರಗಳು ಮತ್ತು ಕೆರೆಗಳ ಸಹಿತ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವಿದೆ. ಇತರರೂ ತಮ್ಮ ನಗರ, ಪಟ್ಟಣಗಳ ಈ ವಿಚಾರಗಳನ್ನು ಪ್ರಸ್ತುತಪಡಿಸಬೇಕೆಂದು ನಾನು ಕೋರುತ್ತೇನೆ. ಇದೊಂದು ಆಸಕ್ತಿಕರ ಥ್ರೆಡ್‌ ಆಗಬಹುದು," ಎಂದು ಪ್ರಧಾನಿ ಬರೆದಿದ್ದಾರೆ.

Similar News