ಸಾವರ್ಕರ್ ವೈಜ್ಞಾನಿಕ ದೃಷ್ಟಿಕೋನದ ವ್ಯಕ್ತಿ: ಶರದ್ ಪವಾರ್

Update: 2023-04-02 03:14 GMT

ನಾಗ್ಪುರ: ವಿನಾಯಕ ವೀರ ಸಾವರ್ಕರ್ "ವೈಜ್ಞಾನಿಕ ಮತ್ತು ಪ್ರಗತಿಪರ ದೃಷ್ಟಿಕೋನ" ಹೊಂದಿದ್ದ ವ್ಯಕ್ತಿ ಎಂದು ಎನ್‌ಸಿಪಿ ಮುಖಂಡ ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ. ಸಾವರ್ಕರ್ ಬಗೆಗಿನ ರಾಹುಲ್‌ಗಾಂಧಿ ಹೇಳಿಕೆಯ ಹಿನ್ನೆಲೆಯಲ್ಲಿ ಎದ್ದಿರುವ ರಾಜಕೀಯ ವಿವಾದ ಗಂಭೀರ ವಿಷಯಗಳಿಂದ ಜನರನ್ನು ವಿಮುಖಗೊಳಿಸುವ ಹುನ್ನಾರ ಎಂದು ಅವರು ವಿಶ್ಲೇಷಿಸಿದ್ದಾರೆ.

"ಈ ಹಿಂದೆ ನಾನು ಕೂಡಾ ಸಾವರ್ಕರ್ ಬಗ್ಗೆ ಕೆಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೆ. ಆದರೆ ಅವು ನಿರ್ದಿಷ್ಟವಾಗಿ ಸಾವರ್ಕರ್ ಮುಖಂಡರಾಗಿದ್ದ ಹಿಂದೂ ಮಹಾಸಭಾ ಬಗ್ಗೆ" ಎಂದು ಅವರು ಸ್ಪಷ್ಟಪಡಿಸಿದರು.

ವೀರ ಸಾವರ್ಕರ್ ಅವರನ್ನು ಆ ಕಾಲಘಟ್ಟದ ಅತ್ಯಂತ ಪ್ರಗತಿಪರ ವ್ಯಕ್ತಿ ಎಂದು ಬಣ್ಣಿಸಿದ ಅವರು, "ಅವರ ಮನೆ ಮುಂದೆಯೇ ಅವರು ದೇವಸ್ಥಾನವನ್ನು ನಿರ್ಮಿಸಿದ್ದರು ಹಾಗೂ ಅದರ ಹೊಣೆಯನ್ನು ವಾಲ್ಮೀಕಿ ಸಮುದಾಐದವರಿಗೆ ವಹಿಸಿದ್ದರು" ಎಂದು ವಿವರಿಸಿದರು.

ವೀರಸಾವರ್ಕರ್ ಬಗೆಗಿನ ರಾಹುಲ್ ಹೇಳಿಕೆಯನ್ನು ತಾವು ಸಹಿಸುವುದಿಲ್ಲ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಹಾಗೂ ವಿರೋಧ ಪಕ್ಷಗಳ ಸಭೆಯಲ್ಲಿ ಇದು ವಿವಾದಾತ್ಮಕ ವಿಷಯವಾಗಿತ್ತು ಎಂದು ಸ್ವತಃ ಪವಾರ್ ಅಭಿಪ್ರಾಯಪಟ್ಟಿದ್ದ ಹಿನ್ನೆಲೆಯಲ್ಲಿ ಪವಾರ್ ಹೇಳಿಕೆ ವಿಶೇಷ ಮಹತ್ವ ಪಡೆದಿದೆ. ಸಾವರ್ಕರ್ ತಮ್ಮ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ಬಳಿ ಕ್ಷಮೆ ಕೋರಿದ್ದರು. "ನಾನು ಸಾವರ್ಕರ್ ಅಲ್ಲ; ನಾನು ಗಾಂಧಿ" ಎಂದು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂ ಬಳಿಕ ಹೇಳಿಕೆ ನೀಡಿದ್ದರು.

Similar News