ಐಪಿಎಲ್: ಹೈದರಾಬಾದ್ ಗೆಲುವಿಗೆ 204 ರನ್ ಗುರಿ ನೀಡಿದ ರಾಜಸ್ಥಾನ

ಸ್ಯಾಮ್ಸನ್, ಬಟ್ಲರ್, ಜೈಸ್ವಾಲ್ ಅರ್ಧಶತಕ

Update: 2023-04-02 12:28 GMT

ಹೈದರಾಬಾದ್, ಎ.2: ನಾಯಕ ಸಂಜು ಸ್ಯಾಮ್ಸನ್(55 ರನ್, 32 ಎಸೆತ), ಜೋಸ್ ಬಟ್ಲರ್(54 ರನ್, 22 ಎಸೆತ) ಹಾಗೂ ಯಶಸ್ವಿ ಜೈಸ್ವಾಲ್(54 ರನ್, 37 ಎಸೆತ)ಅರ್ಧಶತಕಗಳ ಕೊಡುಗೆಯ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್‌ನ 4ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 203 ರನ್ ಗಳಿಸಿದೆ.

ರವಿವಾರ ಟಾಸ್ ಜಯಿಸಿದ ಹೈದರಾಬಾದ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿರುವ ನಿರ್ಧಾರ ತಪ್ಪೆಂದು ಸಾಬೀತಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಮೊದಲ ವಿಕೆಟಿಗೆ 85 ರನ್ ಜೊತೆಯಾಟ ನಡೆಸಿದ ಯಶಸ್ವಿ ಜೈಸ್ವಾಲ್ ಹಾಗೂ ಬಟ್ಲರ್ ಭದ್ರ ಬುನಾದಿ ಹಾಕಿಕೊಟ್ಟರು.

ದೇವದತ್ತ ಪಡಿಕ್ಕಲ್ ಹಾಗೂ ರಿಯಾನ್ ಪರಾಗ್ ಬೇಗನೆ ಔಟಾದರೂ ಕೂಡ ಸಂಜು ಜೈಸ್ವಾಲ್, ಸ್ಯಾಮ್ಸನ್, ಬಟ್ಲರ್ ಅರ್ಧಶತಕಗಳನ್ನು ಸಿಡಿಸಿ ತಂಡವನ್ನು ಆಧರಿಸಿದರು. ಶಿಮ್ರಾನ್ ಹೆಟ್ಮೆಯರ್ ಔಟಾಗದೆ 22 ರನ್(16 ಎಸೆತ)ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಹೈದರಾಬಾದ್ ಪರ ನಟರಾಜನ್(2-23) ಹಾಗೂ ಫಾರೂಕಿ(2-41)ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

Similar News