ಜೈಪುರ ಸ್ಫೋಟ ಆರೋಪಿಗಳ ಖುಲಾಸೆ ಮಾಡಿದ ಹೆಚ್ಚುವರಿ ಎಜಿಯನ್ನು ವಜಾ ಮಾಡಿದ ರಾಜಸ್ಥಾನ ಸರಕಾರ

Update: 2023-04-02 16:06 GMT

ಜೈಪುರ, ಎ.2: ಜೈಪುರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿದ್ದ ನಾಲ್ವರನ್ನು ಉಚ್ಚ ನ್ಯಾಯಾಲಯವು ಖುಲಾಸೆಗೊಳಿಸಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ನಿರ್ವಹಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಜಿ) ರಾಜೇಂದ್ರ ಯಾದವ ಅವರನ್ನು ರಾಜಸ್ಥಾನ ಸರಕಾರವು ಹುದ್ದೆಯಿಂದ ವಜಾಗೊಳಿಸಿದೆ. 

ಅದು ಆರೋಪಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಲಿದೆ. ಶನಿವಾರ ರಾತ್ರಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತನ್ನ ನಿವಾಸದಲ್ಲಿ ಕರೆದಿದ್ದ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

2008, ಮೇ 13ರಂದು 25 ನಿಮಿಷಗಳ ಅವಧಿಯಲ್ಲಿ ಜೈಪುರದ ಎಂಟು ಸ್ಥಳಗಳಲ್ಲಿ ಒಂಭತ್ತು ಬಾಂಬ್ಗಳು ಸ್ಫೋಟಿಸಿದ್ದು,71 ಜನರು ಮೃತಪಟ್ಟು,185 ಜನರು ಗಾಯಗೊಂಡಿದ್ದರು. 2019ರಲ್ಲಿ ಜಿಲ್ಲಾ ನ್ಯಾಯಾಲಯವು ನಾಲ್ವರು ಆರೋಪಿಗಳಿಗೆ ಮರಣ ದಂಡನೆಯನ್ನು ವಿಧಿಸಿತ್ತು.

ಈ ನಡುವೆ ಪ್ರತಿಪಕ್ಷ ಬಿಜೆಪಿಯು, ಯಾದವ್ ಅವರನ್ನು ವಜಾಗೊಳಿಸುವ ಮೂಲಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಕಾಂಗ್ರೆಸ್ ನೇತೃತ್ವದ ಸರಕಾರವು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

Similar News