×
Ad

ಸುಂದರಕಾಂಡ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ

Update: 2023-04-02 20:25 IST

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಹನುಮ ಜಯಂತಿ ಪ್ರಯುಕ್ತ ಇಂದಿನಿಂದ ಆರಂಭ ಗೊಂಡ ಸುಂದರಕಾಂಡ ಪ್ರವಚನ  ಕಾರ್ಯಕ್ರಮಕ್ಕೆ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನ ವರದರಾಜ ಭಟ್, ವಿದ್ವಾನ್ ಗೋಪಾಲಕೃಷ್ಣ ಉಪಾಧ್ಯಾಯ, ಪ್ರಾಯೋಜಕರಾದ ಕಿದಿಯೂರು ಹೋಟೆಲ್ ಮಾಲಕ ಭುವನೇಂದ್ರ ಕಿದಿಯೂರು, ಜಿತೇಶ್ ಕಿದಿಯೂರು, ಭವ್ಯಶ್ರೀ ಕಿದಿಯೂರು, ಯುವರಾಜ್ ಮಾಸ್ಕತ್ ಮೊದಲಾದವರು ಉಪಸ್ಥಿತರಿದ್ದರು. ಇಂದಿನಿಂದ ಎ.6ವರೆಗೆ 6ದಿನಗಳ ಕಾಲ ಸಂಜೆ 6ರಿಂದ 7ವರೆಗೆ ವಿದ್ವಾನ್ ಬ್ರಹ್ಮಣ್ಯಾಚಾರ್ಯ ಪ್ರವಚನ ನಡೆಯಲಿದೆ. 

Similar News