×
Ad

ನೌಕಾಪಡೆಯ ನೂತನ ವರಿಷ್ಠ ಸೂರಜ್ ಬೆರ್ರಿ ಪದಗ್ರಹಣ

Update: 2023-04-02 21:27 IST

ಹೊಸದಿಲ್ಲಿ, ಎ.2:  ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವೈಸ್ ಆಡ್ಮಿರಲ್ ಸೂರಜ್ ಬೆರ್ರಿ ರವಿವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ನೌಕಾಪಡೆಯಲ್ಲಿ 39 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ  ಬಳಿಕ ನಿವೃತ್ತಿಗೊಂಡಿರುವ ವೈಸ್ ಆಡ್ಮಿರಲ್ ಸತೀಶ್ ಕುಮಾರ್ ನಾಮದೇವ್ ಅವರ ಉತ್ತರಾಧಿಕಾರಿಯಾಗಿ ಸೂರಜ್ ಅವರು ನೇಮಕಗೊಂಡಿದ್ದರು.

1987ರ  ಜನವರಿ 1ರಂದು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದ್ದ ಸೂರಜ್ ಬೆರ್ರಿ ಅವರು  ಫಿರಂಗಿ ಹಾಗೂ ಕ್ಷಿಪಣಿ ಸಮರಕಲೆಗಳಲ್ಲಿ ಪರಿಣಿತರು. ಭಾರತೀಯ ನೌಕಾಪಡೆಯ ಕ್ಷಿಪಣಿ ಉಡಾವಕ ನೌಕೆಗಳಾದ ಐಎನ್ಎಸ್ ನಿರ್ಬಿಕ್, ಐಎನ್ಎಸ್ ಕಾರ್ಮುಕ್, ಹೊಂಚುದಾಳಿಯ ನೌಕೆ ಐಎನ್ಎಸ್ ತಲ್ವಾರ್ ಮತ್ತಿತರ ಸಮರ ನೌಕೆಗಳಲ್ಲಿ ಕಮಾಂಡಿಂಗ್ ಆಫೀಸರ್ ಆಗಿ ಕಾರ್ಯನಿರ್ವಹಿಸಿದ್ದರು.

ಶ್ರೀಲಂಕಾ ಹಾಗೂ ಮಾಲ್ಡಿವ್ಸ್ಗಳಲ್ಲಿ ಭಾರತೀಯ ಹೈಕಮೀಶನರ್ ಅವರಿಗೆ ರಕ್ಷಣಾ ಸಲಹೆಗಾರರಾಗಿದ್ದರು ಹಾಗೂ  ನೌಕಾಪಡೆಯ  ಸಿಬ್ಬಂದಿ ಅವಶ್ಯಕತೆಗಳ ನಿರ್ದೇಶನಾಲಯದ ನಿರ್ದೇಶಕ ಸೇರಿದಂತೆ ಹಲವಾರು ಮಹತ್ವದ ಹುದ್ದೆಗಳನ್ನು  ಸೂರಜ್ ಬೆರ್ರಿ ನಿರ್ವಹಿಸಿದ್ದರು.

ಶ್ರೀಲಂಕಾ ಹಾಗೂ ಮಾಲ್ಡೀವ್ಸ್ನಲ್ಲಿ ಸುನಾಮಿ ಪರಿಹಾರ ಕಾರ್ಯಾಚರಣೆಗಳಲ್ಲಿ  ಸಲ್ಲಿಸಿ ಉತ್ಕೃಷ್ಟ ಸೇವೆಗಳಿಗಾಗಿ ಅವರಿಗೆ 2006ರಲ್ಲಿ ವಿಶಿಷ್ಟ ಸೇವಾ ಪದಕ ಮತ್ತು 2015ರಲ್ಲಿ ಕರ್ತವ್ಯ ನಿಷ್ಠೆಗಾಗಿ ನೌಕಾ ಸೇನಾ ಪದಕ ಪುರಸ್ಕಾರಕ್ಕೆ ಪಾತ್ರರಾಗಿದ್ದರು

Similar News