ಗಾಂಜಾ ಮಾರಾಟ ಆರೋಪ : ಓರ್ವನ ಬಂಧನ
Update: 2023-04-02 21:50 IST
ಉಡುಪಿ, ಎ.2: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಓರ್ವನನ್ನು ಉಡುಪಿ ಸೆನ್ ಪೊಲೀಸರು ಎ.2ರಂದು ಮಣಿಪಾಲ ಇಂದಿರಾ ಶಿವರಾಮ್ ಪಾಲಿಟೆಕ್ನಿಕ್ ಕಾಲೇಜು ಎದುರು ಬಂಧಿಸಿದ್ದಾರೆ.
ಬಂಧಿತನನ್ನು ಬಿಹಾರ ಮೂಲದ ರಾಮ್ ಶ್ರೇತ್(32) ಎಂದು ಗುರುತಿಸಲಾಗಿದೆ.
ಬಂಧಿತನಿಂದ 70,000 ರೂ. ಮೌಲ್ಯದ 2 ಕೆ.ಜಿ. 110 ಗ್ರಾಂ ತೂಕದ ಗಾಂಜಾ, 2000ರೂ. ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.