×
Ad

ಕೋಮು ಗಲಭೆ ಕುರಿತು ಮೋದಿ, ಶಾ ಮೌನ ಯಾಕೆ ?: ಕಪಿಲ್ ಸಿಬಲ್

Update: 2023-04-02 22:16 IST

ಹೊಸದಿಲ್ಲಿ, ಎ. 2:  ಪಶ್ಚಿಮಬಂಗಾಳ ಹಾಗೂ ಬಿಹಾರದಲ್ಲಿ ಭುಗಿಲೆದ್ದ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ರಾಜ್ಯಸಭೆ ಸಂಸದ ಕಪಿಲ್ ಸಿಬಲ್ ಅವರು ರವಿವಾರ ಪ್ರಶ್ನಿಸಿದ್ದಾರೆ. ಈ ಹಿಂಸಾಚಾರಕ್ಕೆ 2024ರ ಸಾರ್ವತ್ರಿಕ ಚುನಾವಣೆ ಕಾರಣವಾಗದಿರಲಿ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.

‘‘ಬಂಗಾಳ ಬಿಹಾರದಲ್ಲಿ ಬೆಂಕಿ ಹಚ್ಚುವುದನ್ನು ನಿಲ್ಲಿಸಿ. ದ್ವೇಷದ ಬೀಜ ಬಿತ್ತಬೇಡಿ. ಈ ದ್ವೇಷಕ್ಕೆ ಸಾಮಾನ್ಯ ಮನುಷ್ಯ ಬಲಿಯಾಗುತ್ತಾನೆ. ಇದು ರಾಜಕಾರಣಿಗಳಿಗೆ ಹಾಗೂ ಅವರ ಕಾರ್ಯತಂತ್ರಗಳಿಗೆ ಮಾತ್ರ ಪ್ರಯೋಜನವಾಗುತ್ತದೆ’’ ಎಂದು ಅವರು ಹೇಳಿದ್ದಾರೆ.

‘‘ಈ ಕುರಿತು ಪ್ರಧಾನಿ ಅವರು ಮಾತನಾಡಬೇಕೆಂದು ನಾನು ಬಯಸುತ್ತೇನೆ. ಗೃಹ ಸಚಿವರು ಈ ಹಿಂಸಾಚಾರವನ್ನು ಖಂಡಿಸಬೇಕು ಎಂದು ನಾನು ಬಯಸುತ್ತೇನೆ. ಹಿಂಸಾಚಾರದ ಕುರಿತು ಅವರು ಮಾತನಾಡದೇ ಇರುವುದು ದುರಾದೃಷ್ಟಕರ. ಅವರೇಕೆ ಮಾತನಾಡುತ್ತಿಲ್ಲ?’’ ಎಂದು ಅವರು ಪ್ರಶ್ನಿಸಿದ್ದಾರೆ. ‘‘ಇದು ಎಲ್ಲರಿಗೂ ನನ್ನ ಶ್ರದ್ಧಾಪೂರ್ವಕ ಮನವಿ. ಇದು ಒಂದು ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ದೇಶ ಹಿಂಸಾತ್ಮಕ ಪರಿಸರದಿಂದ ದೂರ ಉಳಿದು ಮುಂದುವರಿಯಬೇಕಾಗಿದೆ’’ ಎಂದು ಅವರು ಹೇಳಿದರು.

Similar News