×
Ad

ಕೇಂದ್ರ ಸೇನಾ ಪಡೆಗಳಲ್ಲಿ ಕಳೆದ 5 ವರ್ಷಗಳಲ್ಲಿ ಸಹೋದ್ಯೋಗಿಗಳಿಂದಲೇ ಹತರಾದ 29 ಸಿಬ್ಬಂದಿ

ವೈಯಕ್ತಿಕ, ಕೌಟುಂಬಿಕ ಸಮಸ್ಯೆ ಕಾರಣ: ಸಚಿವರಿಂದ ಮಾಹಿತಿ

Update: 2023-04-03 14:20 IST

ಹೊಸದಿಲ್ಲಿ: ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳಲ್ಲಿ ಕಳೆದ 5 ವರ್ಷಗಳಲ್ಲಿ 29 ಸಿಬ್ಬಂದಿಗಳನ್ನು ಅವರ  ಸಹೋದ್ಯೋಗಿಗಳೇ ಹತ್ಯೆ ನಡೆಸಿದ್ದಾರೆ, ಇಂತಹ ಘಟನೆಗಳಿಗೆ ಹೆಚ್ಚಾಗಿ ವೈಯಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಗಳು ಕಾರಣವಾಗಿವೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವ ನಿತ್ಯಾನಂದ ರಾಯ್‌ ಲೋಕಸಭೆಗೆ ಇತ್ತೀಚೆಗೆ ಮಾಹಿತಿ ನೀಡಿದ್ದಾರೆ.

ಇವುಗಳಲ್ಲಿ 15 ಘಟನೆಗಳು ಸಿಆರ್‌ಪಿಎಫ್‌, ಒಂಬತ್ತು ಬಿಎಸ್‌ಎಫ್‌, ಎರಡು ಸಿಐಎಸ್‌ಎಫ್‌ ಮತ್ತು ತಲಾ ಒಂದು ಘಟನೆ ಐಟಿಬಿಪಿ, ಎಸ್‌ಎಸ್‌ಬಿ ಮತ್ತು ಎಆರ್‌ನಿಂದ 2018-2022 ನಡುವೆ ವರದಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೇಂದ್ರ ಸೇನಾ ಪಡೆಗಳಲ್ಲಿ ಆತ್ಮಹತ್ಯೆ ಮತ್ತು ಸಹೋದ್ಯೋಗಿಗಳ ಹತ್ಯೆ ಪ್ರಕರಣಗಳ ಕುರಿತು ಪರಿಶೀಲಿಸಲು ಸಚಿವಾಲಯ ಕಾರ್ಯಪಡೆಯೊಂದನ್ನು ರಚಿಸಿತ್ತು. ಈ ಸಮಿತಿ ತನ್ನ ಕರಡು ವರದಿಯನ್ನು ಜನವರಿಯಲ್ಲಿ ನೀಡಿದೆ. ತಮ್ಮ ಸಮಸ್ಯೆಗಳು ಪರಿಹಾರವಾಗದೇ ಇದ್ದಾಗ ಜವಾನರು ಹಿಂಸೆಯಲ್ಲಿ ತೊಡಗುತ್ತಾರೆ. ಕುಟುಂಬ ಸದಸ್ಯರು ತೀವ್ರ ಅನಾರೋಗ್ಯದಲ್ಲಿರುವಾಗ ಅಥವಾ ಸಾವಿಗೀಡಾದ ಸಂದರ್ಭದಲ್ಲೂ ಜವಾನರಿಗೆ ರಜೆಗಳು ದೊರೆಯುತ್ತಿಲ್ಲವೆಂದು ವರದಿಯಲ್ಲಿ ಕಂಡುಕೊಳ್ಳಲಾಗಿದೆ ಹಾಗೂ ಅವಮಾನವು ಅತ್ಯಂತ ದೊಡ್ಡ ಪ್ರಚೋದನೆಯಾಗಿದೆ ಎಂದು ವರದಿ ತಿಳಿಸಿದೆ," ಎಂದು ಸಚಿವರು ತಿಳಿಸಿದರು.

ಎಲ್ಲಾ ಕೇಂದ್ರ ಸಶಸ್ತ್ರ ಸೇನಾ ಪಡೆಗಳ ಸಿಬ್ಬಂದಿಗಳಿಗೆ ಅಗತ್ಯವಿರುವಂತೆ ರಜೆ ನೀಡಲಾಗುತ್ತದೆ. 60 ದಿನಗಳ ವೇತನ ಸಹಿತ ರಜೆ, 15 ದಿನಗಳ ಕ್ಯಾಶುವಲ್‌ ಲೀವ್‌ ಬೇರೆ ಬೇರೆ ಕಡೆ ನಿಯೋಜಿತರಾಗುವ ಜವಾನರಿಗೆ ಲಭ್ಯವಿದ್ದರೆ ಒಂದೇ ಕಡೆ ಕೆಲಸ ಮಾಡುವವರಿಗೆ 30 ದಿನಗಳ ವೇತನ ಸಹಿತ ರಜೆ ಹಾಗೂ ಎಂಟು ದಿನಗಳ ಕ್ಯಾಶುವಲ್‌ ಲೀವ್‌ ಇದೆ," ಎಂದು ಸಚಿವರು ಹೇಳಿದರು.

ಕಳೆದ ವರ್ಷ ಬಿಜೆಪಿ ರಾಜ್ಯಸಭಾ ಸದಸ್ಯ ಬ್ರಜ್‌ಲಾಲ್‌ ಅವರ ನೇತೃತ್ವದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿ "ಕೇಂದ್ರ ಸಶಸ್ತ್ರ ಸೇನಾ ಪಡೆಗಳ ಸಿಬ್ಬಂದಿ ಒತ್ತಡದಲ್ಲಿ ಹಾಗೂ ಕೆಲವೊಮ್ಮೆ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಕೆಲಸ ಮಾಡುವುದರಿಳದ ಅವರ ಒತ್ತಡವನ್ನು ನಿವಾರಿಸಲು ನಿಯಮಿತವಾಗಿ ಅವರಿಗೆ ರಜೆಗಳನ್ನು ಒದಗಿಸಿದರೆ ಅವರು ತಮ್ಮ ಕುಟುಂಬಗಳೊಂದಿಗೆ ಸಮಯ ಕಳೆಯಬಹುದು," ಎಂದು ಹೇಳಿತ್ತು.

ಇದನ್ನೂ ಓದಿ: 'ಹೆಚ್ಚುವರಿ' ರೇಷನ್‌ ಕಾರ್ಡ್‌ ರದ್ದು: ಗುಜರಾತ್ ಸರ್ಕಾರದ ಕ್ರಮದಿಂದ ಆಹಾರ ವಂಚಿತವಾಗುತ್ತಿರುವ ಬುಡಕಟ್ಟು ಕುಟುಂಬಗಳು

Similar News