×
Ad

ಪ್ರಧಾನಿಯಿಂದ 3 ಪ್ರಶ್ನೆಗಳಿಗೆ ಉತ್ತರ ಕೋರಿ ಯುವ ಕಾಂಗ್ರೆಸ್‌ನಿಂದ ದೇಶವ್ಯಾಪಿ ಪೋಸ್ಟ್‌ ಕಾರ್ಡ್‌ ಅಭಿಯಾನ

Update: 2023-04-03 18:07 IST

ಹೊಸದಿಲ್ಲಿ: ಮೂರು ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಂದ ಉತ್ತರಗಳನ್ನು ಕೋರಿ ಯುವ ಕಾಂಗ್ರೆಸ್‌ ಇಂದು ದೇಶವ್ಯಾಪಿ ಮನೆ-ಮನೆಗೆ ಪೋಸ್ಟ್‌ ಕಾರ್ಡ್‌ ಅಭಿಯಾನ ಆರಂಭಿಸಿದೆ.

"ಬಿಜೆಪಿಗೆ ಅದಾನಿ ಎಷ್ಟು ಹಣ ನೀಡಿದ್ದಾರೆ?" ಎಂಬುದು ಯುವ ಕಾಂಗ್ರೆಸ್‌ ಕೇಳಿದ ಮೂರು ಪ್ರಶ್ನೆಗಳಲ್ಲಿ ಒಂದಾಗಿದೆ.

ಇದು ದೇಶವ್ಯಾಪಿ ಆಂದೋಲನ ಮತ್ತು ಮನೆ ಮನೆಗೆ ತೆರಳಿ ಜನರಿಗೆ ಅಭಿಯಾನದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಲಾಗುವುದು, ಈ ಪೋಸ್ಟ್‌ ಕಾರ್ಡ್‌ಗಳನ್ನು ನಂತರ ಪ್ರಧಾನಿ ನರೇಂದ್ರ ಮೋದಿಗೆ ಕಳುಹಿಸಲಾಗುವುದು ಎಂದು ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ದಿಲ್ಲಿಯ ಯುವ ಕಾಂಗ್ರೆಸ್‌ ಉಸ್ತುವಾರಿ ಕೊಕೊ ಪಢಿ ಹೇಳಿದ್ದಾರೆ.

ಇದನ್ನೂ ಓದಿ: ಕತ್ತೆಯ ಹಾಲಿನಿಂದ ತಯಾರಿಸಿದ ಸಾಬೂನು ಮಹಿಳೆಯ ದೇಹವನ್ನು ಸುಂದರವಾಗಿಸುತ್ತದೆ: ಬಿಜೆಪಿ ಸಂಸದೆ ಮೇನಕಾ ಗಾಂಧಿ

Similar News