×
Ad

ಮಣಿಪಾಲ: ಜಿಸಿಪಿಎಎಸ್‌ನಲ್ಲಿ ಯುವ ಪಾರ್ಲಿಮೆಂಟ್

Update: 2023-04-03 21:00 IST

ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರ್ ರ್ಫಾ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ಸಂಸದೀಯ ಕಾರ್ಯವಿಧಾನ ಮತ್ತು ಚರ್ಚೆಗಳ ಉತ್ತಮ ತಿಳುವಳಿಕೆಗಾಗಿ ‘ಯೂಥ್ ಪಾರ್ಲಿಮೆಂಟ್’ ನ್ನು  ಶನಿವಾರ ಹಮ್ಮಿಕೊಳ್ಳಲಾಗಿತ್ತು. 

ಇದನ್ನು ವಿಭಾಗದ ಬಿಎ- ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್‌ನ ವಿದ್ಯಾರ್ಥಿಗಳು ಆಯೋಜಿಸಿದ್ದು, ಇತರ ಎಲ್ಲ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳು ಸಂಸತ್ತಿನ ಕಲಾಪವನ್ನು ಪ್ರಶ್ನೋತ್ತರ ಅವಧಿ, ವಿಧೇಯಕಗಳ ಮಂಡನೆ ಇತ್ಯಾದಿಗಳೊಂದಿಗೆ ಮರು ಸೃಷ್ಟಿಸಿದರು ಮತ್ತು ಆರೋಗ್ಯ-ಕುಟುಂಬ ಕಲ್ಯಾಣ, ಕೃಷಿ, ಮಹಿಳೆ, ಗೃಹ ವ್ಯವಹಾರ ಇತ್ಯಾದಿ ವಿಷಯಗಳ ಬಗ್ಗೆ ಬಿರುಸಿನ ಚರ್ಚೆ ನಡೆಸಿದರು.

ಮಹಿಳಾ ಮೀಸಲಾತಿ ಮಸೂದೆ, ಯುಎಪಿಎ (ತಿದ್ದುಪಡಿ) ಮಸೂದೆ, ಸಲಿಂಗ ವಿವಾಹ ಗುರುತಿಸುವಿಕೆ ಮತ್ತು ರಕ್ಷಣೆ ಮಸೂದೆಯನ್ನು ‘ವಿದ್ಯಾರ್ಥಿ ಸಂಸತ್ತಿ’ನಲ್ಲಿ ಚರ್ಚಿಸಲಾಯಿತು.

ವಿದ್ಯಾರ್ಥಿಗಳಾದ ಅಪೂರ್ವ, ಇನಿಯನ್, ಹರ್ಷಿತಾ, ಯಶಸ್ವಿನಿ ಕಾರ್ಯಕ್ರಮವನ್ನು ಸಂಯೋಜಿಸಿದರು. ಪ್ರಾಧ್ಯಾಪಕಿ ತನಿಷ್ಕಾ ಕೋಟ್ಯಾನ್ ಮತ್ತು ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾರ್ಗದರ್ಶನ ನೀಡಿದರು.

Similar News