×
Ad

ಝಾನ್ಸಿ: ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ, ಯೋಧರ ಬಂಧನ

Update: 2023-04-03 21:33 IST

ಝಾನ್ಸಿ (ಉ.ಪ್ರ),ಎ.3:ಝಾನ್ಸಿ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲೊಂದರ ಬೋಗಿಯಲ್ಲಿ ಮೂವರು ಯೋಧರು ತಮ್ಮ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ಇಬ್ಬರು ಮಹಿಳೆಯರು ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂದೀಪ, ರವೀಂದ್ರ ಮತ್ತು ಸುರೇಶ ಎನ್ನುವವರು ಆರೋಪಿಗಳಾಗಿದ್ದು, ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ.

ಓರ್ವ ಸೇನಾ ಸಿಬ್ಬಂದಿ ತನ್ನ ಫೋನ್ ಕಳೆದಿದೆ ಎಂದು ಹೇಳಿಕೊಂಡು ತಮ್ಮ ಬಳಿ ಮೊಬೈಲ್ ಫೋನ್ ಕೇಳಿದ್ದ. ಬಳಿಕ ತಮ್ಮ ಬಳಿ ಮಾತಿಗೆ ಶುರುವಿಟ್ಟುಕೊಂಡಿದ್ದ ಆತ ಪ್ಲಾಟ್ಫಾರ್ಮ್ ನಂ.7ರಲ್ಲಿ ನಿಂತಿದ್ದ ರೈಲು ಬೋಗಿಗೆ ತಮ್ಮನ್ನು ಕರೆದೊಯ್ದಿದ್ದ. ಅಲ್ಲಿ ಇತರ ಇಬ್ಬರು ಸೇನಾ ಸಿಬ್ಬಂದಿಗಳಿದ್ದು,ಎಲ್ಲರೂ ಸೇರಿ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಮತ್ತು ಇಲ್ಲಿಂದ ತೆರಳುವಂತೆ ಸೂಚಿಸಿದ್ದರು. ತಮ್ಮ ಮೊಬೈಲ್ ಫೋನ್ಗಳನ್ನೂ ಅವರು ಮರಳಿಸಲಿಲ್ಲ ಎಂದು ಸಂತ್ರಸ್ತ ಮಹಿಳೆಯರು ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಘಟನೆಯ ಕುರಿತು ಮಿಲಿಟರಿ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

Similar News