×
Ad

ಪುಣೆ: ಅತ್ತಿಗೆ, ಆಕೆಯ 2 ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕೊಂದು ಬೆಂಕಿ ಹಚ್ಚಿದ ವ್ಯಕ್ತಿಯ ಬಂಧನ

Update: 2023-04-06 10:15 IST

ಪುಣೆ: ಮಹಾರಾಷ್ಟ್ರದ ಪುಣೆ ನಗರದಲ್ಲಿ 30 ವರ್ಷದ ವ್ಯಕ್ತಿಯೊಬ್ಬ ತನ್ನ ಅತ್ತಿಗೆ ಹಾಗೂ  ಆಕೆಯ ಇಬ್ಬರು ಅಪ್ರಾಪ್ತ ವಯಸ್ಸಿನ  ಮಕ್ಕಳನ್ನು ಕತ್ತು ಹಿಸುಕಿ ಕೊಂದು ನಂತರ ಶವಗಳಿಗೆ ಬೆಂಕಿ ಹಚ್ಚಿರುವ ಘಟನೆ ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದಿದೆ.

ಬುಧವಾರ ಸಂಜೆ ಕೊಂಡ್ವಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯು ತನ್ನ 25 ವರ್ಷದ ಅತ್ತಿಗೆ ಬೇರೊಬ್ಬ  ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಆಕ್ರೋಶಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 201 (ಅಪರಾಧದ ಪುರಾವೆಗಳು ಕಣ್ಮರೆಯಾಗಲು ಕಾರಣ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಧವಾರ ಆರೋಪಿಯು  ಅಕ್ರಮ ಸಂಬಂಧದ ಕುರಿತಾಗಿ ತನ್ನಅತ್ತಿಗೆಯೊಂದಿಗೆ  ಜಗಳವಾಡಿದ್ದ.

ಆರೋಪಿಯು ಕೋಪದ ಭರದಲ್ಲಿ ಮಹಿಳೆ ಹಾಗೂ ಆಕೆಯ  4 ಹಾಗೂ  6 ವರ್ಷದ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಕೊಂಡ್ವಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಮೃತದೇಹಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಕೊಂಡ್ವಾದ ಪಿಸೋಲಿ ಪ್ರದೇಶದಲ್ಲಿ ಮಹಿಳೆಯ ಮನೆಯ ಮುಂಭಾಗದ ತಗಡಿನ ಶೆಡ್‌ನಲ್ಲಿ ಬೆಡ್‌ಶೀಟ್‌ಗಳು ಹಾಗೂ  ಕಟ್ಟಿಗೆಯನ್ನು ಬಳಸಿ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Similar News