×
Ad

ನಾನು ಕಾಂಗ್ರೆಸ್‌ ತ್ಯಜಿಸಲು ರಾಹುಲ್ ಗಾಂಧಿ ಕಾರಣ: ಗುಲಾಮ್ ನಬಿ ಆಝಾದ್

Update: 2023-04-06 12:43 IST

ಹೊಸದಿಲ್ಲಿ: ಕಾಂಗ್ರೆಸ್‌ನಿಂದ (Congress) ನಾನು ನಿರ್ಗಮಿಸಲು ರಾಹುಲ್ ಗಾಂಧಿ (Rahul Gandhi) ಕಾರಣ ಎಂದು ನೇರವಾಗಿ ಆರೋಪಿಸಿರುವ ಹಿರಿಯ ರಾಜಕಾರಣಿ ಗುಲಾಮ್ ನಬಿ ಆಝಾದ್ (Ghulam Nabi Azad), "ನೀವು ಪುರಾತನ ಪಕ್ಷದಲ್ಲಿ ಉಳಿಯಬೇಕಿದ್ದರೆ ಬೆನ್ನು ಮೂಳೆ ಇಲ್ಲದವರಾಗಿರಬೇಕು" ಎಂದು ವ್ಯಂಗ್ಯವಾಡಿದ್ದಾರೆ ಎಂದು indianexpress.com ವರದಿ ಮಾಡಿದೆ.

ಯುಪಿಎ-2 ಅವಧಿಯ ಕುರಿತು ಪ್ರಸ್ತಾಪಿಸಿರುವ ಆಝಾದ್, ಶಿಕ್ಷೆಗೊಳಗಾಗಿರುವ ಸಂಸದ ಹಾಗೂ ಶಾಸಕರನ್ನು ಅನರ್ಹಗೊಳಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶದಿಂದ ರಕ್ಷಿಸಲು ಸರ್ಕಾರವು ಸುಗ್ರೀವಾಜ್ಞೆ ಜಾರಿ ಮಾಡಲು ಮುಂದಾದಾಗ ರಾಹುಲ್ ಗಾಂಧಿ ಅದರ ಪ್ರತಿಯನ್ನು ಹರಿದು ಬಿಸಾಕಿದ್ದರು. ಆಗ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ರಾಹುಲ್ ಗಾಂಧಿಯವರ ಆ ಒತ್ತಡಕ್ಕೆ ಮಣಿಯಬಾರದಿತ್ತು.‌ ರಾಹುಲ್ ಗಾಂಧಿಯವರ ಆಕ್ಷೇಪದ ಹೊರತಾಗಿಯೂ ಆಗಿನ ಯುಪಿಎ ಸಚಿವ ಸಂಪುಟ ದುರ್ಬಲವಾಗಿತ್ತು ಎಂದು ಯುಪಿಎ ಸಚಿವರೂ ಆಗಿದ್ದ ಅವರು ಅಭಿಪ್ರಾಯ ಪಟ್ಟಿದ್ದಾರೆ.

ತಮ್ಮ ಆತ್ಮಕಥೆ "ಆಝಾದ್" ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮತ್ತೆ ನಾನು ಕಾಂಗ್ರೆಸ್ ಪಕ್ಷಕ್ಕೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

PTI ಸುದ್ದಿ ಸಂಸ್ಥೆ ಪ್ರಕಾರ, ನೀವು ಕಾಂಗ್ರೆಸ್ ತೊರೆಯಲು ರಾಹುಲ್ ಗಾಂಧಿ ಕಾರಣವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಆಝಾದ್, "ಹೌದು. ನಾನೊಬ್ಬನೆ ಅಲ್ಲ, ಆದರೆ ಹತ್ತಾರು ಯುವ ಮತ್ತು ಹಿರಿಯ ನಾಯಕರಿಬ್ಬರೂ ಕೂಡಾ. ನೀವು ಒಮ್ಮೆ ಕಾಂಗ್ರೆಸ್ ಸೇರ್ಪಡೆಯಾದರೆ ನೀವು ಬೆನ್ನುಮೂಳೆ ಇಲ್ಲದವರಾಗುತ್ತೀರಿ. ನೀವು ಶಸ್ತ್ರಚಿಕಿತ್ಸೆಗೆ ಒಳಗಾಗಲೇಬೇಕಾಗುತ್ತದೆ" ಎಂದು ಹೇಳಿದ್ದಾರೆ.

ಆದರೆ, ಜಮ್ಮು ಮತ್ತು ಕಾಶ್ಮೀರದ ಚುನಾವಣೆಯ ನಂತರ ಬಿಜೆಪಿಯೊಂದಿಗೆ ಕೈಜೋಡಿಸುವ ಮುನ್ಸೂಚನೆಯನ್ನು ಪ್ರಾಸಂಗಿಕವಾಗಿ ನೀಡಿರುವ ಆಝಾದ್, ಈಗಿನ ರಾಜಕಾರಣದಲ್ಲಿ ಯಾರೂ ಅಸ್ಪೃಶ್ಯರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ತಾಜ್‌ಮಹಲ್ ಧ್ವಂಸಗೊಳಿಸಿ, ಶಹಜಹಾನ್-ಮುಮ್ತಾಝ್ ಪ್ರೀತಿಯ ಕುರಿತು ತನಿಖೆ ನಡೆಸಬೇಕು ಎಂದ ಬಿಜೆಪಿ ಶಾಸಕ  

Similar News