×
Ad

ಫೋರ್ಬ್ಸ್‌ ಶ್ರೀಮಂತರ ಪಟ್ಟಿಗೆ ಪ್ರವೇಶ ಪಡೆದ Zerodha ಸ್ಥಾಪಕರಾದ ನಿತಿನ್‌, ನಿಖಿಲ್‌ ಕಾಮತ್‌

Update: 2023-04-06 15:48 IST

ಹೊಸದಿಲ್ಲಿ: Zerodha ಸಹಸ್ಥಾಪಕರಾದ ನಿತಿನ್‌ ಕಾಮತ್‌ (Nithin Kamath) ಹಾಗೂ ನಿಖಿಲ್‌ ಕಾಮತ್‌ (Nikhil Kamath) ಅವರು ಫೋರ್ಬ್ಸ್‌ ವರ್ಲ್ಡ್ಸ್‌ ಬಿಲಿಯನೇರ್ಸ್‌ ಪಟ್ಟಿ 2023 ರಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತದ ಅತ್ಯಂತ ದೊಡ್ಡ ಸ್ಟಾಕ್‌ ಬ್ರೋಕಿಂಗ್‌ ಕಂಪೆನಿಯಾಗಿರುವ Zerodha ಸಹ-ಸ್ಥಾಪಕರಾಗಿರುವ ನಿತಿನ್‌ ಕಾಮತ್‌ ಅವರು ತಮ್ಮ 2.7 ಬಿಲಿಯನ್‌ ಮೌಲ್ಯದ ಸಂಪತ್ತಿನೊಂದಿಗೆ ಫೋರ್ಬ್ಸ್‌ ಶ್ರೀಮಂತರ ಪಟ್ಟಿಯಲ್ಲಿ 1104ನೇ ಸ್ಥಾನ  ಪಡೆದಿದ್ದರೆ, ಅವರ ಸಹೋದರ, ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ಹಾಗೂ ವಿತ್ತ ನಿರ್ವಹಣಾ ಸಂಸ್ಥೆ ಟ್ರೂ ಬೀಕನ್‌ ಮಾಲಕರಾಗಿರುವ ನಿಖಿಲ್‌ ಕಾಮತ್‌ ತಮ್ಮ 1.1 ಬಿಲಿಯನ್‌ ಡಾಲರ್‌ ಸಂಪತ್ತಿನೊಂದಿಗೆ ಫೋರ್ಬ್ಸ್‌ ಪಟ್ಟಿಯಲ್ಲಿ 2405 ನೇ ಸ್ಥಾನದಲ್ಲಿದ್ದಾರೆ.

ನಿತಿನ್‌  ಹಾಗೂ ನಿಖಿಲ್‌ 2010 ರಲ್ಲಿ ಡಿಸ್ಕೌಂಟ್‌ ಬ್ರೋಕರೇಜ್‌ ಸಂಸ್ಥೆ Zerodha ಸ್ಥಾಪಿಸಿದ್ದರು. ಸ್ಟಾಕ್‌, ಕರೆನ್ಸಿ ಮತ್ತು ಕಮಾಡಿಟಿಗಳಿಗೆ ಕಡಿಮೆ ಬೆಲೆಯ ಬ್ರೋಕರೇಜ್‌ ಸೇವೆಗಳನ್ನು ಒದಗಿಸುವ ಸಂಸ್ಥೆ ತನ್ನ ಗ್ರಾಹಕರಿಗೆ ಬಳಕೆದಾರ-ಸ್ನೇಹಿ ಟ್ರೇಡಿಂಗ್‌ ಪ್ಲಾಟ್‌ಫಾರ್ಮ್‌ಗಳನ್ನು ಒದಗಿಸುವ ಮೂಲಕ ಭಾರತದ  ಸಾಂಪ್ರದಾಯಿಕ ಬ್ರೋಕರೇಜ್‌ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದೆ.

ಈಗ Zerodha ತನ್ನ ಸಕ್ರಿಯ ರಿಟೇಲ್‌ ಕ್ಲೈಂಟ್‌ಗಳ ಸಂಖ್ಯೆಯ ಆಧಾರದಲ್ಲಿ ದೇಶದ ಅತ್ಯಂತ ದೊಡ್ಡ ಬ್ರೋಕರೇಜ್‌ ಸಂಸ್ಥೆಗಳಲ್ಲಿ ಒಂದಾಗಿದೆ.

Similar News