ಮಹಿಳೆ ನಾಪತ್ತೆ
Update: 2023-04-06 21:29 IST
ಉಡುಪಿ, ಎ.6: ಆರೋಗ್ಯ ತಪಾಸಣೆಗಾಗಿ 2022ರ ಫೆಬ್ರವರಿ 7 ರಂದು ನಗರದ ಜಿಲ್ಲಾಸ್ಪತ್ರೆಗೆ ತೆರಳಿದ್ದ ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರು ಸ್ತ್ರೀ ಸೇವಾ ನಿಕೇತನದಲ್ಲಿ ದಾಖಲಾಗಿದ್ದ ನಳಿನಿ ದೇವಾಡಿಗ (45) ಎಂಬ ಮಹಿಳೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ 4 ಇಂಚು ಎತ್ತರ, ಕಪ್ಪು ಮೈಬಣ್ಣ, ಸಪೂರ ಉದ್ದನೆಯ ಶರೀರ ಹೊಂದಿದ್ದು, ಮಾತನಾಡಲು ಬರುವುದಿಲ್ಲ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2520444, ಪಿ.ಎಸ್.ಐ ಮೊ.ನಂ: 9480805465, ಪೊಲೀಸ್ ನಿರೀಕ್ಷಕರು ಮೊ.ನಂ: 9480805408 ಅನ್ನು ಸಂಪರ್ಕಿಸಬಹುದು ಎಂದು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.