×
Ad

ಉಡುಪಿ: ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿ ವಂಚನೆ

Update: 2023-04-06 21:44 IST

ಉಡುಪಿ, ಎ.6: ಕೆವೈಸಿ ಅಪ್‌ಡೇಟ್ ಹೆಸರಿನಲ್ಲಿ ವ್ಯಕ್ತಿಯೊಬ್ಬ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ಮಣ್ಣು ಪುನಾರು ನಿವಾಸಿ ಬಾಲಕೃಷ್ಣ ಶೆಣೈ ಅವರ ಮೊಬೈಲ್‌ಗೆ ಎ.5ರಂದು ಕೆವೈಸಿ ಅಪ್‌ಡೇಟ್ ಮಾಡುವ ಬಗ್ಗೆ ಸಂದೇಶ ಬಂದಿದ್ದು, ಈ ಸಂದೇಶವನ್ನು ನಂಬಿ ಕರೆ ಮಾಡಿದಾಗ ವ್ಯಕ್ತಿಯೊಬ್ಬರು ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಬ್ಯಾಂಕ್ ಖಾತೆಯ ವಿವರ, ಎ.ಟಿ.ಎಂ. ಕಾರ್ಡ್ ವಿವರ, ಸಿ.ವಿ.ವಿ. ವಿವರವನ್ನು ಪಡೆದುಕೊಂಡರು.

ಅಲ್ಲದೇ ಮೊಬೈಲ್ ಗೆ ಬಂದಿರುವ ಓಟಿಪಿಯನ್ನು ಕೂಡ ಪಡೆದು, ಅದೇ ದಿನ ಖಾತೆಯಿಂದ 1,98,221ರೂ. ಹಣವನ್ನು ಆನ್‌ಲೈನ್ ಮುಖೇನ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ. 

Similar News