ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸುವಂತೆ ಸ್ಟಾಲಿನ್ ಗೆ ಖರ್ಗೆ ಆಹ್ವಾನ

Update: 2023-04-07 09:50 GMT

ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರು ವಿರೋಧ ಪಕ್ಷಗಳ ಸಭೆಗೆ ಹಾಜರಾಗುವಂತೆ  ತಮಿಳುನಾಡು ಮುಖ್ಯಮಂತ್ರಿ ಹಾಗೂ  ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.

 ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಸಾಮಾನ್ಯ ಕಾರ್ಯತಂತ್ರವನ್ನು ರೂಪಿಸಲು ಹಾಗೂ  ಒಗ್ಗಟ್ಟಿನ ಒಕ್ಕೂಟ  ಪ್ರಸ್ತುತಪಡಿಸಲು ಸಮಾನ ಮನಸ್ಕ ಪಕ್ಷದ ನಾಯಕರ ಸಭೆಯನ್ನು ಕಾಂಗ್ರೆಸ್ ಪ್ರಸ್ತಾಪಿಸಿದೆ.

ಮೂಲಗಳ ಪ್ರಕಾರ  ಖರ್ಗೆ ಅವರು ಸ್ಟಾಲಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಹಾಗೂ  ವಿರೋಧ ಪಕ್ಷದ ಸಭೆಗೆ ಸೇರಲು ಅವರನ್ನು ಆಹ್ವಾನಿಸಿದ್ದಾರೆ.

 ಪ್ರಸ್ತಾವಿತ ಸಭೆಯಲ್ಲಿ ತಮ್ಮ ಬೆಂಬಲ ಹಾಗೂ  ಭಾಗವಹಿಸುವಿಕೆಯ ಬಗ್ಗೆ  ಸ್ಟಾಲಿನ್ ಅವರು  ಖರ್ಗೆ ಅವರಿಗೆ ಭರವಸೆ ನೀಡಿದರು ಎಂದು ತಿಳಿದುಬಂದಿದೆ.

 ತಮಿಳುನಾಡಿನಲ್ಲಿ ಡಿಎಂಕೆ ಕಾಂಗ್ರೆಸ್‌ನ ಪ್ರಮುಖ ಮಿತ್ರ ಪಕ್ಷವಾಗಿದೆ.

Similar News