×
Ad

ಜೀವ ಬೆದರಿಕೆ ಹಿನ್ನೆಲೆ: ದುಬಾರಿ ಗುಂಡುನಿರೋಧಕ ಕಾರು ಖರೀದಿಸಿದ ಸಲ್ಮಾನ್ ಖಾನ್

Update: 2023-04-07 16:49 IST

ಮುಂಬೈ: ಕಳೆದ ಕೆಲವು ತಿಂಗಳಿನಿಂದ ನಟ ಸಲ್ಮಾನ್ ಖಾನ್‌ಗೆ (Salman Khan) ಲಾರೆನ್ಸ್ ಬಿಷ್ಣೋಯ್ ಮತ್ತು ಗುಂಪಿನಿಂದ ಹತ್ತಾರು ಜೀವ ಬೆದರಿಕೆ ಕರೆಗಳು ಬಂದಿವೆ. ಜೀವ ಬೆದರಿಕೆ ಇರುವ ಅವರಿಗೆ ವೈ ಶ್ರೇಣಿಯ ಭದ್ರತೆ ಒದಗಿಸಲಾಗಿದ್ದರೂ, ಅವರೂ ಕೂಡಾ ತಮ್ಮ ರಕ್ಷಣೆಗಾಗಿ ಮುಂಜಾಗ್ರತಾ ಕ್ರಮಗಳ ಮೊರೆ ಹೋಗಿದ್ದಾರೆ ಎಂದು timesofindia.com ವರದಿ ಮಾಡಿದೆ.

ಸಲ್ಮಾನ್ ಖಾನ್ ದುಬಾರಿ ಕಾರು ಖರೀದಿಗೆ ಹಣ ತೊಡಗಿಸಿದ್ದು, ಹಾಲು ಬಣ್ಣದ ನಿಸ್ಸಾನ್ ಪ್ಯಾಟ್ರೋಲ್ ಗುಂಡು ನಿರೋಧಕ ಕಾರಿನಲ್ಲಿ ಅವರು ಪಯಾಣಿಸುತ್ತಿರುವುದು ಮತ್ತೆ ಮತ್ತೆ ಕಂಡು ಬಂದಿದೆ. ವರದಿಗಳ ಪ್ರಕಾರ, ಸದ್ಯ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದೆ ಇರುವುದರಿಂದ ಸಲ್ಮಾನ್ ಖಾನ್ ವಿಶೇಷವಾಗಿ ಈ ಕಾರನ್ನು ಆಮದು ಮಾಡಕೊಂಡಿದ್ದಾರೆ ಎಂದು ಹೇಳಲಾಗಿದೆ.

ಈ ಕಾರು ಎರಡು ಹಂತದ ವಿನ್ಯಾಸಗಳಾದ B6 ಅಥವಾ B7 ಮಾದರಿಯಲ್ಲಿ ದೊರೆಯುತ್ತದೆ. B6 ಮಾದರಿಯ ಕಾರು 41 ಮಿಮೀ ಗಾತ್ರದ ಗುಂಡುನಿರೋಧಕ ಗಾಜನ್ನು ಹೊಂದಿದ್ದು, ಅದರಲ್ಲಿನ ಪ್ರಯಾಣಿಕರನ್ನು ಭಾರಿ ಸಾಮರ್ಥ್ಯದ ರೈಫಲ್ ದಾಳಿಯಿಂದ ರಕ್ಷಿಸುತ್ತದೆ. B7 ಮಾದರಿಯ ಕಾರು 78 ಮಿಮೀ ಗಾತ್ರದ ಗುಂಡು ನಿರೋಧಕ ಗಾಜು ಹೊಂದಿದೆ ಎಂದು ವರದಿಯಾಗಿದೆ.

ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆಯ ಪ್ರಕರಣದಲ್ಲಿ ಆರೋಪಿಯಾದಾಗಿನಿಂದ ಲಾರೆನ್ಸ್ ಬಿಷ್ಣೋಯ್ ಹಾಗೂ ಆತನ ಸಹಚರರು ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕುತ್ತಿದ್ದಾರೆ. 

Similar News