×
Ad

ಹೆಬ್ರಿ: ಶ್ರೀಚಾರುಕೀರ್ತಿ ಭಟ್ಟಾರಕ ಪಟ್ಟಚಾರ್ಯರಿಗ ನುಡಿನಮನ

Update: 2023-04-07 21:00 IST

ಹೆಬ್ರಿ : ಮುನಿಯಾಲು ಬ್ರಹ್ಮಶ್ರೀ ಗುರುನಾರಾಯಣ  ಸ್ವಾಮಿ ಸೇವಾ ಸಂಘದ ವತಿಯಿಂದ ಅಭಿಮಾನಿಗಳು ಹಾಗೂ ಶಿಷ್ಯ ವೃಂದ ಇತ್ತೀಚೆಗೆ ಅಗಲಿದ ಶ್ರೀಕ್ಷೇತ್ರ ಶ್ರವಣಬೆಳಗೊಳದ  ಸ್ವಸ್ತಿ ಶ್ರೀಚಾರುಕೀರ್ತಿ ಭಟ್ಟಾರಕ ಪಟ್ಟ ಚಾರ್ಯ ಮಹಾಸ್ವಾಮಿ ಮತ್ತು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಇವರಿಗೆ ನುಡಿನಮನ ಕಾರ್ಯಕ್ರಮ ಗುರುವಾರ ನಡೆಯಿತು.

ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ  ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿಗಳ ಧ್ಯೇಯದಂತೆ ಶ್ರವಣಬೆಳಗೊಳದ  ಶ್ರೀಚಾರುಕೀರ್ತಿ ಭಟ್ಟಾರಕ ಪಟ್ಟಚಾರ್ಯ ಮಹಾಸ್ವಾಮೀಜಿ ಮತ್ತು ಹಿರಿಯ ಸಾಹಿತಿ  ಅಂಬಾತನಯ ಮುದ್ರಾಡಿ ನಾಡಿಗೆ ಸ್ಮರಣೀಯವಾದ ಸೇವೆ ಸಲ್ಲಿಸಿ ಅಜರಾಮರವಾಗಿದ್ದಾರೆ. ಮುನಿಯಾಲು ಬ್ರಹ್ಮಶ್ರೀ ಗುರುನಾರಾಯಣ  ಸ್ವಾಮಿ ಸೇವಾ ಸಂಘದ ಬೆಳವಣಿಗೆಗೂ ದೊಡ್ಡ ಕೊಡುಗೆಯನ್ನು ಇಬ್ಬರೂ ನೀಡಿ ದ್ದಾರೆ ಎಂದು ಮುನಿಯಾಲು ಬ್ರಹ್ಮಶ್ರೀ ಗುರುನಾರಾಯಣ  ಸ್ವಾಮಿ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಎಂ.ಆನಂದ ಪೂಜಾರಿ ಕಾಡುಹೊಳೆ ಹೇಳಿದರು.

ವಕೀಲ ವರಂಗ ಸುರೇಶ ಪೂಜಾರಿ, ಸಂಪನ್ಮೂಲ ವ್ಯಕ್ತಿ ಮಾತಿಬೆಟ್ಟು ಪ್ರಕಾಶ ಪೂಜಾರಿ ಮಾತನಾಡಿ ಅಗಲಿದ ಚೇತನಗಳ ಆದರ್ಶ ತಿಳಿಸಿ ನುಡಿನಮನ ಸಲ್ಲಿಸಿದರು. ಮುನಿಯಾಲು ಬ್ರಹ್ಮಶ್ರೀ  ಗುರುನಾರಾಯಣ  ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಹರೀಶ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಹಿರಿಯರಾದ ವರಂಗ ವಿಠ್ಠಲ ಪೂಜಾರಿ, ರವಿ ಪೂಜಾರಿ ಚಟ್ಕಲ್ ಪಾದೆ, ಮುದ್ದು ಪೂಜಾರಿ, ರತ್ನಾಕರ ಪೂಜಾರಿ, ಭಾಸ್ಕರ ಪೂಜಾರಿ, ಕಾಡುಹೊಳೆ ಮಂಜುನಾಥ್ ಟಿ, ವಿಜಯಲಕ್ಷ್ಮಿ ಪೂಜಾರಿ, ಮಂಜುನಾಥ್, ಪ್ರಮೀಳ ಹರೀಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು. 

Similar News