12ನೇ ತರಗತಿ ಎನ್‌ಸಿಇಆರ್‌ಟಿ ಪಠ್ಯದಲ್ಲಿ ತಪ್ಪು ಮಾಹಿತಿ: ಸಿಖ್ಖರ ಅಸಮಾಧಾನ

Update: 2023-04-08 04:16 GMT

ಅಮೃತಸರ: ಹನ್ನೆರಡನೇ ತರಗತಿಯ ಎನ್‌ಸಿಇಆರ್‌ಟಿ ರಾಜಕೀಯ ವಿಜ್ಞಾನ ಪಠ್ಯಪುಸ್ತಕದಲ್ಲಿ ಸಿಖ್ಖರ ಬಗೆಗಿನ ವಿವರಗಳನ್ನು ಎನ್‌ಸಿಇಆರ್‌ಟಿ ತಪ್ಪಾಇಗಿ ವಿಶ್ಲೇಷಿಸಿದೆ ಎಂದು ಸಿಕ್ಖರ ಅತ್ಯುನ್ನತ ಸಂಸ್ಥೆಯಾದ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್‌ಜಿಪಿಸಿ) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಎಸ್‌ಜಿಪಿಸಿ ಮುಖ್ಯಸ್ಥ ಹರ್ಜೀಂದರ್ ಸಿಂಗ್ ಧಾಮಿ ಈ ಬಗ್ಗೆ ಹೇಳಿಕೆ ನೀಡಿ, ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ, "ಸ್ವಾತಂತ್ರ್ಯದ ಬಳಿಕ ಭಾರತದ ರಾಜಕೀಯ" ಪುಸ್ಕಕದ ಪ್ರಾದೇಶಿಕ ಆಕಾಂಕ್ಷೆಗಳು ಎಂಬ ಶೀರ್ಷಿಕೆಯ 8ನೇ ಅಧ್ಯಾಯದಲ್ಲಿ ಆನಂದ್‌ಪುರ ಸಾಹಿಬ್ ನಿರ್ಣಯಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿದೆ. ಇದು ಸಮುದಾಯದ ಭಾವನೆಗಳಿಗೆ ನೋವು ತಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

1973ರ ನಿರ್ಣಯವನ್ನು ವಿವರಿಸುವ ವೇಳೆ, ಸರ್ಕಾರದ ಹಕ್ಕುಗಳು ಮತ್ತು ಒಕ್ಕೂಟ ಸಂರಚನೆಯ ಬಗ್ಗೆ ವಿವರಿಸಲಾಗಿದೆ. "ಸಿಖ್ಖರನ್ನು ಪ್ರತ್ಯೇಕತಾವಾದಿಗಳು ಎಂದು ಬಿಂಬಿಸಿರುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇಂಥ ಅತ್ಯಂತ ಆಕ್ಷೇಪಾರ್ಹ ಉಲ್ಲೇಖವನ್ನು ಎನ್‌ಸಿಇಆರ್‌ಟಿ ತಕ್ಷಣ ಕಿತ್ತುಹಾಕಬೇಕು ಎಂದು ಆಗ್ರಹಿಸಿದರು.

12ನೇ ತರಗತಿ ಪಠ್ಯದಲ್ಲಿ ಕೆಲ ಹಳೆಯ ಮಾಹಿತಿಗಳನ್ನು ಕಿತ್ತುಹಾಕುವ ವೇಳೆ ಕೋಮು ಆಯಾಮವನ್ನು ಪರಿಗಣಿಸಲಾಗಿದೆ ಹಾಗೂ ಕೆಲ ಹೊಸ ಅಂಶಗಳನ್ನು ಸೇರಿಸಲಾಗಿದೆ ಎಂದು ಅವರು ಹೇಳಿದರು.

"ಹಾಲಿ ಇರುವ ಕೇಂದ್ರಸರ್ಕಾರಕ್ಕೆ ಯಾವುದು ಸೂಕ್ತ ಎನಿಸುತ್ತದೆಯೋ ಅದಕ್ಕೆ ಅನುಸಾರವಾಗಿ ಬದಲಾವಣೆ ಮಾಡಲಾಗಿದೆ ಎಂದು ಎನ್‌ಸಿಇಆರ್‌ಟಿ ಹೇಳಿದೆ. ಅಲ್ಪಸಂಖ್ಯಾತರ ಬಗೆಗಿನ ಪಠ್ಯಗಳನ್ನು ಕಿತ್ತುಹಾಕಿ ಬೇಕಾಬಿಟ್ಟಿ ಪಠ್ಯಕ್ರಮ ಸಿದ್ಧಪಡಿಸಲಾಗಿದೆ, ಅಂತೆಯೇ ಆನಂದಪು ಸಾಹಿಬ್ ನಿರ್ಣಯವನ್ನು ಕೂಡಾ ತಪ್ಪಾಗಿ ವಿಶ್ಲೇಷಿಸಲಾಗಿದೆ ಎಂದು ದೂರಿದರು. ಆನಂದ್‌ಪುರ ಸಾಹಿಬ್ ನಿರ್ಣಯ ಐತಿಹಾಸಿಕ ದಾಖಲೆ. ಇದರಲ್ಲಿ ಯಾವುದೇ ತಪ್ಪು ಇಲ್ಲ" ಎಂದು ಸ್ಪಷ್ಟಪಡಿಸಿದರು.

Similar News