×
Ad

ಕೆಟ್ಟ ಉಡುಪಿನಲ್ಲಿ ಹೆಣ್ಣುಮಕ್ಕಳು ಶೂರ್ಪನಖಿಯಂತೆ ಕಾಣುತ್ತಾರೆ ಎಂದ ಬಿಜೆಪಿ ಮುಖಂಡ

Update: 2023-04-08 11:34 IST

ಇಂದೋರ್: ಕೆಟ್ಟ ಉಡುಪಿನಲ್ಲಿ ಹೆಣ್ಣುಮಕ್ಕಳು ರಾಮಾಯಣದ ಶೂರ್ಪನಖಿಯಂತೆ ಕಾಣುತ್ತಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗುರುವಾರ ಆಯೋಜಿಸಿದ್ದ ಹನುಮಾನ್ ಮತ್ತು ಮಹಾವೀರ ಜಯಂತಿ ಸಮಾರಂಭದಲ್ಲಿ ಇವರು ವ್ಯಕ್ತಪಡಿಸಿದ ಅಭಿಪ್ರಾಯದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

"ನಾನು ರಾತ್ರಿ ಮನೆ ಬಿಟ್ಟಾಗ ಯುವಜನತೆ ಮತ್ತು ಮಕ್ಕಳು ಮಾದಕ ವಸ್ತುಗಳ ಪ್ರಭಾವದಲ್ಲಿ ಇರುವುದನ್ನು ಗಮನಿಸಿದೆ. ಕಾರಿನಿಂದ ಇಳಿದು ಅವರ ಮನಸ್ಥಿತಿ ಸರಿಪಡಿಸಲು ಐದರಿಂದ ಏಳು ಏಟು ಹೊಡೆಯಬೇಕು ಎನಿಸಿತು ಎಂದು ಬಿಜೆಪಿ ಮುಖಂಡ ಹೇಳಿದ್ದಾರೆ.

"ನಾವು ಮಹಿಳೆಯರಲ್ಲಿ ದೇವತೆಯನ್ನು ಕಾಣುತ್ತೇವೆ. ಆದರೆ ಕೆಟ್ಟ ಉಡುಪು ಧರಿಸಿ ಹೆಣ್ಣುಮಕ್ಕಳು ಓಡಾಡುವುದು ನೋಡಿದರೆ ಅವರು ದೇವತೆಗಳಂತೆ ಕಾಣುವುದಿಲ್ಲ. ಶೂರ್ಪನಖಿಯಂತೆ ಕಾಣುತ್ತಾರೆ" ಎಂದು ಅವರು ಹೇಳಿದ್ದಾರೆ.

Similar News