×
Ad

ದಿಲ್ಲಿ: ಪಿವಿಸಿ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಗೋಡೌನ್ ನಲ್ಲಿ ಭಾರೀ ಅಗ್ನಿ ಅವಘಡ

Update: 2023-04-08 12:35 IST

ಹೊಸದಿಲ್ಲಿ: ದಿಲ್ಲಿಯ ಟಿಕ್ರಿ ಕಲಾನ್‌ ಪ್ರದೇಶದಲ್ಲಿರುವ ಪಿವಿಸಿ ಮಾರುಕಟ್ಟೆಯಲ್ಲಿನ ಪ್ಲಾಸ್ಟಿಕ್ ಗೋಡೌನ್ ನಲ್ಲಿ ಶನಿವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ. 25 ಅಗ್ನಿಶಾಮಕ ವಾಹನಗಳು ತಕ್ಷಣ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲಾಯಿತು.

 ಬೆಂಕಿಯನ್ನು ಹತೋಟಿಗೆ ತರಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಿಲೋಮೀಟರ್ ದೂರದಿಂದ ಬೃಹತ್ ಜ್ವಾಲೆ ಕಾಣಿಸಿಕೊಂಡಿದೆ.

ಸದ್ಯಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Similar News