ವಂಶ ರಾಜಕಾರಣ ಇರುವ ಕಡೆ ಭ್ರಷ್ಟಾಚಾರ ಬೆಳೆಯತೊಡಗುತ್ತದೆ: ವಿಪಕ್ಷಗಳ ವಿರುದ್ಧ ಪ್ರಧಾನಿ ಪ್ರಹಾರ
Update: 2023-04-08 14:04 IST
ಹೊಸದಿಲ್ಲಿ:ಸಿಬಿಐ ಹಾಗೂ ಈಡಿಯಂತಹ ತನಿಖಾ ಸಂಸ್ಥೆಗಳ "ನಿರಂಕುಶ ಬಳಕೆಯ" ವಿರುದ್ಧ ಇತ್ತೀಚೆಗೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ(Narendra Modi), ಭ್ರಷ್ಟಾಚಾರ ಹಾಗೂ ರಾಜವಂಶದ ರಾಜಕೀಯವು ಪರಸ್ಪರ ಸಂಬಂಧ ಹೊಂದಿವೆ ಎಂದು ಶನಿವಾರ ಹೇಳಿದ್ದಾರೆ.
ತೆಲಂಗಾಣದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಮೋದಿ, “ಕೆಲವು ಭ್ರಷ್ಟ ಪಕ್ಷಗಳು ತಮ್ಮ ಭ್ರಷ್ಟಾಚಾರದ ಖಾತೆಗಳನ್ನು ತೆರೆಯದಂತೆ ನ್ಯಾಯಾಲಯದ ಮೊರೆ ಹೋಗಿದ್ದವು ಹಾಗೂ ಅಲ್ಲಿ ಅವುಗಳಿಗೆ ಹೊಡೆತ ಬಿತ್ತು’’ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರಕಾರದ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದರು ಹಾಗೂ ರಾಜ್ಯದ "ಅಸಹಕಾರ" ದಿಂದ ಯೋಜನೆಗಳು ವಿಳಂಬವಾಗುತ್ತಿವೆ ಎಂದು ಆರೋಪಿಸಿದರು.