×
Ad

ಕಾಂಗ್ರೆಸ್‌ನ ಮಾಜಿ ನಾಯಕ ಸಿ.ಆರ್.ಕೇಶವನ್ ಬಿಜೆಪಿಗೆ ಸೇರ್ಪಡೆ

Update: 2023-04-08 14:19 IST

ಹೊಸದಿಲ್ಲಿ: ರಾಜಗೋಪಾಲಾಚಾರಿ ಅವರ ಮರಿಮೊಮ್ಮಗ ಹಾಗೂ ಕಾಂಗ್ರೆಸ್‌ನ ಮಾಜಿ ನಾಯಕ ಸಿ.ಆರ್ ಕೇಶವನ್(CR Kesavan ) ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

"ಪ್ರಧಾನಿ ತಮಿಳುನಾಡಿನಲ್ಲಿರುವ ದಿನದಂದು ನನ್ನನ್ನು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ-ಬಿಜೆಪಿಗೆ ಸೇರಿಸಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ’’  ಎಂದು ಪಕ್ಷಕ್ಕೆ ಸೇರಿದ ಮೇಲೆ ಸಿ.ಆರ್. ಕೇಶವನ್ ಹೇಳಿದರು.

ಕಾಂಗ್ರೆಸ್ ಮಾಧ್ಯಮ ಪ್ಯಾನಲಿಸ್ಟ್ ಹಾಗೂ  ಭಾರತದ ಮೊದಲ ಗವರ್ನರ್ ಜನರಲ್ ಸಿ.  ರಾಜಗೋಪಾಲಾಚಾರಿ ಅವರ ಮೊಮ್ಮಗ ಸಿ.ಆರ್. ಕೇಶವನ್ ಅವರು ಈ ವರ್ಷದ ಫೆಬ್ರವರಿಯಲ್ಲಿಕಾಂಗ್ರೆಸ್  ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದರು.

 ಎರಡು ದಶಕಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ ನಂತರವೂ  ಯಾವುದೇ ಮೌಲ್ಯದ ಕುರುಹುಗಳನ್ನು ನಾನು ನೋಡಿಲ್ಲ ಎಂದು ಕೇಶವನ್  ಹೇಳಿದ್ದರು.

Similar News