ಕತೆಗಾರ, ಕವಿಗೆ ಜಗತ್ತು ಭಯ ಪಡುತ್ತದೆ: ಜೋಗಿ
ನೂರಾರು ಲೇಖಕರ ನೂರಾರು ಕತೆಗಳು ಪುಸ್ತಕ ಬಿಡುಗಡೆ
ಉಡುಪಿ: ಕತೆ ಮತ್ತು ಕವನದಲ್ಲಿ ನಮ್ಮ ಅಂತರಂಗ ಮಾತನಾಡುತ್ತದೆ. ಕತೆಗಾರ ಮತ್ತು ಕವಿ ತಮ್ಮ ಅಂತರ ದಲ್ಲಿರುವುದನ್ನು ಬರೆಯುತ್ತಾರೆ. ಜಗತ್ತನ್ನು ಟೀಕಿಸುತ್ತಾನೆ ಮತ್ತು ಪ್ರಭುತ್ವ ವಿರುದ್ಧವೂ ಬರೆಯುತ್ತಾನೆ. ಅದೇ ಕಾರಣಕ್ಕೆ ಕತೆಗಾರ ಮತ್ತು ಕವಿಗೆ ಜಗತ್ತು ಭಯ ಪಡುತ್ತದೆ ಎಂದು ಸಾಹಿತಿ ಗಿರೀಶ್ ರಾವ್ ಹತ್ವಾರ್(ಜೋಗಿ) ಹೇಳಿದ್ದಾರೆ.
ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಉಡುಪಿ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ನೂರಾರು ಲೇಖಕರ ನೂರಾರು ಕತೆಗಳು ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಕಥೆ ಬರೆಯವು ಓದು ಮತ್ತು ಕತೆಗಳ ಜೊತೆ ಬೆಸೆಯುವುದು ಮುಖ್ಯವಾಗಿ ರುತ್ತದೆ. ಕತೆ ಬರೆಯುವುದು ಶೋಕಿಗೆ ಅಲ್ಲ. ಕತೆಗಾರ ಬೆಳೆಯಲು ಶೋಕಿಗೆ ಮೀರಿದ ಗುಣಗಳಿರಬೇಕು. ಕತೆ ಬರೆಯುವುದು ನಿರಂತರವಾದ ಕ್ರಿಯೆ ಯಾಗಿದೆ. ಇಲ್ಲಿರುವ ಒಂದೊಂದು ಕತೆ ಒಂದೊಂದು ನೆನಪು ಕೊಡುತ್ತದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ ವಹಿಸಿದ್ದರು. ಪತ್ರಕರ್ತ ವಸಂತ ಗಿಳಿಯಾರು ಪುಸ್ತಕ ಪರಿಚಯ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್ ಉಪಸ್ಥಿತರಿದ್ದರು.
ಸಂಪಾದಕ ಮರವಂತೆ ನಾಗರಾಜ್ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.