ಎ.9ರಂದು ‘ಸಾರ್ವಕಾಲಿಕ’ ಪುಸ್ತಕ ಬಿಡುಗಡೆ
Update: 2023-04-08 21:00 IST
ಉಡುಪಿ, ಎ.8: ಉಡುಪಿ ರಥಬೀದಿ ಗೆಳೆಯರು ಸಾಂಸ್ಕೃತಿಕ ಸಂಘಟನೆಯ ವತಿಯಿಂದ ಹಿರಿಯ ಅಂಕಣಕಾರ ಡಾ.ಬಿ.ಭಾಸ್ಕರ ರಾವ್ ಇವರ ‘ಸಾರ್ವಕಾಲಿಕ’ ಸಂಸ್ಕೃತಿ ಬರಹಗಳ ಸಂಗ್ರಹ ಪುಸ್ತಕ ಬಿಡುಗಡೆ ಸಮಾರಂಭವು ಎ.9ರಂದು ಸಂಜೆ 4.30ಕ್ಕೆ ಉಡುಪಿ ಎಂಜಿಎಂ ಕಾಲೇಜು ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ ಪುಸ್ತಕ ಬಿಡುಗಡೆಗೊಳಿಸಲಿರುವರು. ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಕೃತಿ ಅವಲೋಕನ ಮಾಡಲಿರುವರು ಎಂದು ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.